Advertisement

ಹೊಸಬರೊಂದಿಗೆ ರವಿಚಂದ್ರನ್‌ ಆಟ!

07:00 PM Oct 11, 2017 | |

ರವಿಚಂದ್ರನ್‌ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಬಹಳ ದಿನಗಳೇ ಆಗಿದೆ. ಆ ಬೇಸರದಲ್ಲಿರುವ ಅವರ ಅಭಿಮಾನಿಗಳು, ಸುಮ್ಮನೆ ಈ ವಾರ ಬಿಡುಗಡೆಯಾಗುತ್ತಿರುವ ಜಗನ್‌ ಅಭಿನಯದ “ಆಡೂ ಆಟ ಆಡೂ’ ಚಿತ್ರವನ್ನು ನೋಡುವುದಕ್ಕೆ ಹೋದರೆ ಅಲ್ಲಿ ರವಿಚಂದ್ರನ್‌ ಅವರು ಕಂಡರೆ ಗಾಬರಿ ಬೀಳಬಾರದು. ಏಕೆಂದರೆ, “ಆಡೂ ಆಟ ಆಡೂ’ ಚಿತ್ರದಲ್ಲಿ ರವಿಚಂದ್ರನ್‌ ಸಹ ಕಾಣಿಸುತ್ತಾರೆ.

Advertisement

ಹಾಗಂತ ಅವರು ಚಿತ್ರದಲ್ಲಿ ಅಭಿನಯಿಸಿರಬಹುದು ಎಂದುಕೊಂಡರೆ ತಪ್ಪು, ಅವರು ಅತಿಥಿಯಾಗಿ ಬಂದು ಒಂದು ಶಾಟ್‌ನಲ್ಲಿ ಕಾಣಿಸಿಕೊಂಡು ಮಾಯವಾಗುತ್ತಾರೆ. ಹಾಗಂತ ಖುದ್ದು ನಟ-ನಿರ್ಮಾಪಕ ಜಗನ್‌ ಹೇಳಿಕೊಂಡಿದ್ದಾರೆ. “ನಾನು ಬಹಳ ಇಷ್ಟಪಡುವ ನಟ ರವಿಚಂದ್ರನ್‌. ಅವರು ನಮ್ಮ ಚಿತ್ರದಲ್ಲಿ ಒಂದು ಶಾಟ್‌ನಲ್ಲಾದರೂ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತು. ಹೋಗಿ ಕೇಳಿದೆ. ಅವರು ಒಪ್ಪಿಕೊಂಡರು.

ಚಿತ್ರದ ಒಂದು ಶಾಟ್‌ನಲ್ಲಿ ಅವರು ಬಂದು, ವಿಶ್‌ ಮಾಡಿ ಹೋಗುತ್ತಾರೆ. ರವಿಚಂದ್ರನ್‌ರಂತಹ ನಟ ನಮ್ಮ ಚಿತ್ರದಲ್ಲಿದ್ದಾರೆ ಎನ್ನುವುದೇ ಹೆಮ್ಮೆ. ನಾವು ಅವರ ಸಿನಿಮಾ ನೋಡಿ ಬೆಳೆದವರು. ಅವರ ಸ್ಟೈಲ್‌ ಮಾಡಿ ಬಂದವರು. ಅವರನ್ನು ದೇವರ ಲೆವೆಲ್‌ಗೆ ನೋಡುವವರು. ಅಂತಹವರು ಬಂದು ನಮ್ಮ ಸಿನಿಮಾದಲ್ಲಿ ಕಾಣಿಸಿಕೊಂಡರೆ, ಖುಷಿ ಆಗದೇ ಇರುತ್ತದಾ’ ಎನ್ನುತ್ತಾರೆ ಜಗನ್‌.

ಇನ್ನು “ಆಡೂ ಆಟ ಆಡೂ’ ಚಿತ್ರವು ತಮಿಳಿನ “ತಿರಟ್ಟು ಪಯಲೆ’ ಚಿತ್ರದ ರೀಮೇಕ್‌. ಕನ್ನಡದಲ್ಲಿ ಜಗನ್‌ ನಾಯಕನಾಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಶ್ರುತಿ ಮರಾಠೆ ಇದ್ದಾರೆ. ಇನ್ನು ಸುಮನ್‌ ರಂಗನಾಥ್‌, ತಿಲಕ್‌, ಬಿಜು ಮೆನನ್‌ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಬುದ್ಧಿವಂತ’ ಚಿತ್ರದ ನಂತರ ರಾಮನಾಥ್‌ ಋಗ್ವೇದಿ ಈ ಚಿತ್ರವನ್ನು ನಿರ್ದೇಶಿಸಿದ್ದು, ವಿ. ಮನೋಹರ್‌ ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next