“ನಾನು ಹಂತಕ್ಕೆ ಬಂದಿದ್ದು ಥಿಯೇಟರ್‌ಗಳಿಂದ. ನನ್ನನ್ನು ಸ್ಟಾರ್ ಮಾಡಿದ್ದೇ ಥಿಯೇಟರ್‌ಗಳು. ಹಾಗಾಗಿ, ಆವತ್ತಿನಿಂದ, ಇವತ್ತಿನವರೆಗೂ ನನ್ನ ಮೊದಲ ಪ್ರಾಶಸ್ತ್ಯ, ಗಮನ ಏನಿದ್ದರೂ ಅದು ಥಿಯೇಟರ್‌ಗಳಿಗೆ ಮಾತ್ರ. ನಾನು ಥಿಯೇಟರ್‌ಗಳಿಗಾಗಿ ಸಿನಿಮಾ ಮಾಡೋದು…’- ಹೀಗೆಂದವರು ನಟ, ನಿರ್ದೇಶಕ ರವಿಚಂದ್ರನ್.
ರವಿಚಂದ್ರನ್ ಇಂಥದ್ದೊಂದು ಮಾತಿಗೆ ಕಾರಣ ಅವರ ಮುಂಬರುವ “ದೃಶ್ಯ-2′ ಚಿತ್ರ. ಮಲೆಯಾಳಂ ರಿಮೇಕ್ ಆಗಿರುವ “ದೃಶ್ಯ-2′ ಒಟಿಟಿಯಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಆಗಿತ್ತು. ಹೀಗಾಗಿ ಕನ್ನಡದಲ್ಲೂ “ದೃಶ್ಯ-2′ ಒಟಿಟಿಯಲ್ಲಿ ಬಿಡುಗಡೆ ಆಗಬಹುದಾ? ಎಂಬ ಪ್ರಶ್ನೆ ಅನೇಕರಲ್ಲಿತ್ತು. ಈ ಬಗ್ಗೆ ಮಾತನಾಡಿರುವ ರವಿಚಂದ್ರನ್, ಒಟಿಟಿ ಬಗ್ಗೆ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಚಿತ್ರೀಕರಣ ಮುಗಿಸಿದ ದೃಶ್ಯ -2
“ನಾವೆಲ್ಲ ಮೊದಲಿನಿಂದಲೂ ಸಿನಿಮಾಗಳನ್ನು ಥಿಯೇಟರ್‌ಗಳಲ್ಲೇ ನೋಡಿ ಬೆಳೆದವರು. ಥಿಯೇಟರ್‌ಗಳಿಗೆ ಈಗಲೂ ಅದರದ್ದೇ ಆದ ಮಹತ್ವವಿದೆ. ಹಾಗಾಗಿ ನನ್ನ ಮೊದಲಪ್ರಾಶಸ್ತ್ಯ ಏನಿದ್ದರೂ ಅದು ಥಿಯೇಟರ್‌ಗಳಿಗೆ. ನಮಗಂತೂ ಸದ್ಯಕ್ಕೆ ಒಟಿಟಿ ಸಹವಾಸಬೇಡ. ಪ್ರಪಂಚದಲ್ಲೇ ಅತಿ ಅಗ್ಗದ ಮನರಂಜನೆ ಸಿಗೋದು ಅಂದ್ರೆ ಅದು ಸಿನಿಮಾದಲ್ಲಿ ಮಾತ್ರ. ಸಿನಿಮಾಗಳಲ್ಲ ಥಿಯೇಟರ್‌ನಲ್ಲೇ ನೋಡಿ ಎಂಜಾಯ್ ಮಾಡ್ಬೇಕು’ ಅನ್ನೋದು ರವಿಚಂದ್ರನ್ ಮಾತು.
“ಕೋವಿಡ್ ಭಯದಿಂದ ಜನ ಥಿಯೇಟರ್ ಗಳಿಂದ ದೂರ ಉಳಿದಿದ್ದರೂ, “ದೃಶ್ಯ 2′ ಸಿನಿಮಾದ ಮೂಲಕ ಮತ್ತೆ ಥಿಯೇಟರ್‌ಗೆ ಬರುತ್ತಾರೆ ಅನ್ನೋದು ರವಿಚಂದ್ರನ್ ಅವರ ಭರವಸೆಯ ಮಾತು. ಈ ಹಿಂದೆಬಂದಿದ್ದ “ದೃಶ್ಯ’ ಸಿನಿಮಾ ಹೊಸ ರೆಕಾರ್ಡ್‌ಬರೆದಿತ್ತು. ಆ ಸಿನಿಮಾಇಡೀ ಫ್ಯಾಮಿಲಿಯನ್ನ ಥಿಯೇಟರ್‌ಗೆ ಕರೆ ತಂದಿತ್ತು. ಈ ಸಿನಿಮಾದ ಮೂಲಕ ಮತ್ತೆ ಆಡಿಯನ್ಸ್‌ನ ಕರೆ ತರುತ್ತೇನೆ’ ಎನ್ನುತ್ತಾರೆ ರವಿಚಂದ್ರನ್.