ಕಾನ್ಪುರ: ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಭಾರತದ ಮೂರನೇ ಬೌಲರ್ ಎಂಬ ಸಾಧನೆಗೆ ರವಿ ಅಶ್ವಿನ್ ಸೋಮವಾರ ಪಾತ್ರರಾದರು.
ಹರ್ಭಜನ್ ಸಿಂಗ್ ಅವರ 417 ಟೆಸ್ಟ್ ವಿಕೆಟ್ ದಾಖಲೆಯನ್ನು ಅಶ್ವಿನ್ ಇಂದು ಮುರಿದರು. ಕಾನ್ಪುರ ಟೆಸ್ಟ್ ನ ನಾಲ್ಕನೇ ದಿನದಾಟದ ಅಂತ್ಯಕ್ಕೆ 417 ವಿಕೆಟ್ ಪಡೆದಿದ್ದ ಅಶ್ವಿನ್ ಇಂದು ಕಿವೀಸ್ ಆರಂಭಿಕ ಟಾಮ್ ಲ್ಯಾಥಂ ಅವರನ್ನು ಬೌಲ್ಡ್ ಮಾಡುವ ಮೂಲಕ ಹೊಸ ಮೈಲಿಗಲ್ಲು ರಚಿಸಿದರು.
ಇದನ್ನೂ ಓದಿ:ವೃದ್ಧಿಮಾನ್ ಸಾಹಾಗೆ ಆರಂಭಿಕ ಆಟಗಾರನ ಸ್ಥಾನ ನೀಡಿ: ವಾಸಿಂ ಜಾಫರ್ ವಿಶೇಷ ಸಲಹೆ
ಕನ್ನಡಿಗ ಅನಿಲ್ ಕುಂಬ್ಳೆ ಮತ್ತು ಕಪಿಲ್ ದೇವ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ ಅವರು 619 ವಿಕೆಟ್ ಕಿತ್ತಿದ್ದರೆ, ಕಪಿಲ್ ದೇವ್ ಅವರು 434 ವಿಕೆಟ್ ಕಬಳಿಸಿದ್ದರು.ಇದೀಗ ಅಶ್ವಿನ್ ಮೂರನೇ ಸ್ಥಾನಕ್ಕೇರಿದ್ದಾರೆ.
Related Articles
ರವಿಚಂದ್ರನ್ ಅಶ್ವಿನ್ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್ ಪಡೆದಿದ್ದರು.