Advertisement

ಅಶ್ವಿ‌ನ್‌ ಮಾದರಿ ಕ್ರಿಕೆಟಿಗ: ಕಿರ್ಮಾನಿ ಶ್ಲಾಘನೆ

06:20 AM Feb 19, 2018 | Team Udayavani |

ಚೆನ್ನೈ: ಭಾರತದ ಆಫ್ಸ್ನಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಅವರ ಸಾಧನೆಗಳನ್ನು ಶ್ಲಾಘಿಸಿರುವ ಮಾಜಿ ವಿಕೆಟ್‌ ಕೀಪರ್‌ ಸಯ್ಯದ್‌ ಕಿರ್ಮಾನಿ, ಯುವ ಆಟಗಾರರಿಗೆ ಅವರು ಮಾದರಿ ಎಂದಿದ್ದಾರೆ.

Advertisement

ಚೆನ್ನೈನಲ್ಲಿ ಅಶ್ವಿ‌ನ್‌ ಅವರಿಗೆ “ಐಕಾನ್‌ ಆಫ್ ಚೆನ್ನೈ’ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಕಿರ್ಮಾನಿ, “ಅಶ್ವಿ‌ನ್‌ ಮಾಡಿರುವ ಸಾಧನೆಗಳನ್ನು ವರ್ಣಿಸಲು ನನಗೆ ಪದಗಳು ಸಿಗುತ್ತಿಲ್ಲ. ಭವಿಷ್ಯದಲ್ಲಿ ಉತ್ತಮ ಆಟಗಾರರನ್ನು ಸೃಷ್ಟಿಸಿ ದಂತಕತೆಯೆನಿಸಲಿರುವ ಅಶ್ವಿ‌ನ್‌ ಅವರಿಗೆ ನನ್ನ  ಅಭಿನಂದನೆಗಳು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next