ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಇಂದು ಮುಖಾಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಕೋಚ್ ರವಿಶಾಸ್ತ್ರಿ ಇಬ್ಬರು ಹುಡುಗಿಯರ ಜೊತೆ ನಿಂತುಕೊಂಡಿರುವ ಫೋಟೋವನ್ನು ಪತ್ರಕರ್ತ ಡೆನ್ನಿಸ್ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ರವಿಶಾಸ್ತ್ರಿ ಇಬ್ಬರು ಹುಡುಗಿಯರ ಜೊತೆ ಇದ್ದಿರುವ ಫೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿರುವ ಆಸಿಸ್ ಪತ್ರಕರ್ತ ಡೆನ್ನಿಸ್ ಫ್ರೀಡ್ ಮನ್, ಭಾರತದ ವಿಶ್ವಕಪ್ ತಯಾರಿ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ!
ರವಿಶಾಸ್ತ್ರಿಯ ಯುವತಿಯರ ಜೊತೆ ಇದ್ದಿರುವ ಫೋಟೋ ಫೋಸ್ಟ್ ಗೆ ಟ್ವೀಟಿಗರು ಕುಹಕದ ಪ್ರತಿಕ್ರಿಯೆ ನೀಡಿ ವ್ಯಂಗ್ಯವಾಡಿದ್ದಾರೆ. “ ಕೋಚ್ ಚೀಯರ್ ಲೀಡರ್ಸ್ ವ್ಯವಸ್ಥೆ” ಮಾಡಿಕೊಂಡಿದ್ದಾರೆ ಎಂದು ಟ್ವೀಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ ಶಾಸ್ತ್ರಿ ಅಭಿಮಾನಿಗಳು ಆಸೀಸ್ ಪತ್ರಕರ್ತನ ಟ್ವೀಟ್ ತೀಕ್ಷ್ಣವಾದ ತಿರುಗೇಟನ್ನೇ ನೀಡಿದ್ದಾರೆ. “ ನಾವು ಆನ್ ಆ್ಯಂಡ್ ಆಫ್ ಫೀಲ್ಡ್ ಎರಡರಲ್ಲೂ ಆಡುತ್ತೇವೆ” ಎಂದು ಶಾಸ್ತ್ರಿ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ.
ಶಾಸ್ತ್ರಿಯ ಪಾಕ್ ಅಭಿಮಾನಿಯೊಬ್ಬ, ಪ್ರೀತಿಯ ಹುಡುಗಿಯರೇ ಒಂದು ವೇಳೆ ನಿಮಗೆ ರವಿ ಶಾಸ್ತ್ರಿ ಯಾರೆಂದು ಗೊತ್ತಿಲ್ಲದಿದ್ದರೆ ಮತ್ತೊಮ್ಮೆ ಅಜರ್ ಸಿನಿಮಾವನ್ನು ವೀಕ್ಷಿಸಿ ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.