Advertisement
ಗಂಗೂಲಿ-ರವಿಶಾಸ್ತ್ರಿ ನಡುವೆ ಬಹಳ ಹಿಂದಿನಿಂದಲೇ ವಿವಾದವಿದೆ. 2016ರಲ್ಲಿ ಗಂಗೂಲಿ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದರು. ಆ ವೇಳೆ ರವಿಶಾಸ್ತ್ರಿಯ ಬದಲು ಕುಂಬ್ಳೆಯನ್ನು ತರಬೇತುದಾರರಾಗಿ ನೇಮಿಸಿದ್ದರು. ಆಗ ಇಬ್ಬರ ನಡುವೆ ಬಹಿರಂಗ ವಾಕ್ಸಮರ ನಡೆದಿತ್ತು. ಅದಾದ ನಂತರ ಪ್ರಕರಣ ತಣ್ಣಗಾಗಿತ್ತು. ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ರವಿಶಾಸ್ತ್ರಿ ಮತ್ತೆ ತರಬೇತುದಾರರಾಗಿದ್ದಾರೆ. ಆದ್ದರಿಂದ ಇಬ್ಬರ ನಡುವಿನ ಹಳೆಯ ಸಿಟ್ಟು ಜೋರಾಗಿದೆ ಎಂಬ ವರದಿಗಳಾಗುತ್ತಿವೆ.ಈ ಬಗ್ಗೆ ಪ್ರತಿಕ್ರಿಯಿಸಿದ ರವಿಶಾಸ್ತ್ರಿ, ಸೌರವ್ ಗಂಗೂಲಿಯ ಕ್ರಿಕೆಟ್ ಸಾಧನೆಗಳ ಬಗ್ಗೆ ನನಗೆ ಬಹಳ ಗೌರವವಿದೆ. ಅವರು ಬಹಳ ಕಷ್ಟದ ಸಮಯದಲ್ಲಿ ಭಾರತ ಕ್ರಿಕೆಟ್‌ನ ಚುಕ್ಕಾಣಿ ಹಿಡಿದಿದ್ದಾರೆ. ಅದಕ್ಕೆಲ್ಲ ಜನರ ನಂಬಿಕೆಯಿದ್ದರೆ ಮಾತ್ರ ಸಾಧ್ಯ. ಗಂಗೂಲಿಯ ಬಗ್ಗೆ ನನಗೆ ಗೌರವವಿಲ್ಲವೆಂದು ಜನ ಭಾವಿಸಿದ್ದರೆ, ಅದು ಮುಟಾuಳತನದ ಪರಮಾವಧಿ ಎಂದು ಹೇಳಿದ್ದಾರೆ.