Advertisement
ಅವಕಾಶಗಳ ಸುರಿಮಳೆ‘ಮುದುಕನ ಮದುವೆ’ ‘ಕಿವುಡನ ಕಿತಾಪತಿ’ ‘ಬಸ್ ಕಂಡಕ್ಟರ್’ ನಾಟಕಗಳಲ್ಲಿ ರವಿ ಅವರ ಅಭಿನಯ ಹೆಸರು ಮಾಡಿದೆ. ತುಳು ನಾಟಕಗಳಲ್ಲಿ ಬೇಡಿಕೆಯ ಕಾಮಿಡಿ ಕಲಾವಿದರಾಗಿ ಬೆಳೆದಿದ್ದಾರೆ. ‘ಬೆಚ್ಚ ನೆತ್ತರ್’ ಅವರು ಅಭಿನಯಿಸಿದ ಪ್ರಥಮ ತುಳು ನಾಟಕ. ಆನಂತರ ಶಿವಾನಂದ ಶೆಟ್ಟಿ ಮಂಗಲ್ಪಾಡಿ ನೇತೃತ್ವದ ಅಮ್ಮ ಕಲಾವಿದೆರ್ ಮಂಗಳೂರು ತಂಡದಲ್ಲಿ ಸೇರಿಕೊಂಡರು. ‘ನಮ್ಮ ಅಮ್ಮ “ಚಿಕ್ಕಮ್ಮ’, ‘ಮದಿಮೆದ ದುಂಬುನಾನಿ’ ನಾಟಕಗಳಲ್ಲಿ ಅಭಿನಯಿಸಿದರು. ಕೃಷ್ಣ ಜಿ. ಮಂಜೇಶ್ವರ ನೇತೃತ್ವದ ಐಸಿರಿ ನಾಟಕ ಕಲಾವಿದರು ತಂಡದಲ್ಲಿ ‘ಕೈ ಪತ್ತಿನಾರ್’, ‘ಜನನೇ ಬೇತೆ’ ಹಾಗೂ ‘ಅಂಚಗೆ ಇಂಚಗೆ’ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಮ್ಮ ಟಿವಿ ಕುಡ್ಲ ಚಾನೆಲ್‌ನ ಕಾಮಿಡಿ ಶೋಗಳಾದ ‘ಬಲೆ ತೆಲಿಪಾಲೆ’ ವಿ4 ಚಾನೆಲ್‌ನ ‘ಕಾಮಿಡಿ ಪ್ರೀಮಿಯರ್ ಲೀಗ್’ನಲ್ಲಿ ಕುಸಾಲ್ ತಂಡದ ಸದಸ್ಯರಾಗಿ ಅಭಿನಯಿಸಿದ್ದಾರೆ. ಮಂತ್ರವಾದಿಯ ಪಾತ್ರ ಬಹು ಜನಪ್ರಿಯ.
ಕಾಮಿಡಿ ಶೋಗಳನ್ನು ವೀಕ್ಷಿಸುತ್ತಿದ್ದ ಪಿಲಿಬೈಲ್ ಯಮುನಕ್ಕ ಖ್ಯಾತಿಯ ಸೂರಜ್ ರೈ ಅವರು ರವಿ ಅವರನ್ನು ಗುರುತಿಸಿ ‘ಅಮ್ಮರ್ ಪೊಲೀಸಾ’ ತುಳು ಚಲನಚಿತ್ರದಲ್ಲಿ ಅವಕಾಶ ನೀಡಿದರು. ಸಂದೇತ್ ಶೆಟ್ಟಿ ಅಜ್ರಿಯವರ ಮೂಲಕ ‘ಕತ್ತಲಕೋಣೆ’ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರೀಕರಣ ನಡೆಯುತ್ತಿರುವ ‘ವಿಐಪಿ ಲಾಸ್ಟ್ ಬೆಂಚ್’ ಕನ್ನಡ ಸಿನೆಮಾದಲ್ಲಿ ಹಾಸ್ಯ ಕಲಾವಿದರಾಗಿ ನಟಿಸುತ್ತಿದ್ದಾರೆ. ‘ರಡ್ಡ್ ಎಕ್ರೆ’ ಹಾಗೂ ಹೆಸರಿಡದ ಮತ್ತೂಂದು ತುಳು ಸಿನೆಮಾದಲ್ಲೂ ಅವಕಾಶ ಪಡೆದಿದ್ದಾರೆ.
Related Articles
ಹಾಸ್ಯ ಸೀಮಿತವಾಗಿರಬೇಕು. ಪ್ರೇಕ್ಷಕರನ್ನು ನಗಿಸಲು ಪ್ರಯತ್ನಿಸಬಾರದು. ಮಾತಿನ ಮೋಡಿ ಹಾಗೂ ನಟನೆಯ ಮೂಲಕವೇ ನೋಡುಗರಲ್ಲಿ ನಗು ಉಕ್ಕಿಸಬೇಕು. ನಾಟಕದ ಸಂದೇಶ ಸಮಾಜಕ್ಕೆ ಒಳಿತಾಗುವಂತಿರಬೇಕು. ಶಾಲಾ ದಿನಗಳಲ್ಲಿ ಅವಕಾಶ, ಮಾಹಿತಿಯ ಕೊರತೆಯಿಂದ ಹಿಂದೆ ಬಿದ್ದೆ. ಆನಂತರ ಅವಕಾಶ ಒಲಿದು ಬಂತು. ಗ್ರಾಮೀಣ ಪ್ರತಿಭೆಗಳು ಮಾಹಿತಿ ಹಾಗೂ ಅವಕಾಶಗಳಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ರಾಮಕುಂಜದಲ್ಲಿ ಕಲಾಕೇಂದ್ರವನ್ನು ಆರಂಭಿಸಲು ಚಿಂತನೆ ನಡೆಸುತ್ತಿದ್ದೇನೆ.
– ರವಿ ರಾಮಕುಂಜ,
ಕಲಾವಿದ
Advertisement
ಸದಾನಂದ ಆಲಂಕಾರು