Advertisement

ರಾಜ್ಯ ಪೊಲೀಸರ ವಶಕ್ಕೆ ರವಿ ಪೂಜಾರಿ

10:07 AM Feb 25, 2020 | sudhir |

ಬೆಂಗಳೂರು/ ಮಂಗಳೂರು: ಹದಿನೈದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು ರಾಜ್ಯಕ್ಕೆ ಕರೆತಂದಿದ್ದಾರೆ.

Advertisement

ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ರವಿ ಪೂಜಾರಿಯನ್ನು ಬಂಧಿಸಲಾಗಿದ್ದು, ಅಲ್ಲಿಗೆ ತೆರಳಿದ್ದ ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ ಆತನನ್ನು ವಶಕ್ಕೆ ಪಡೆದುಕೊಂಡಿದೆ. ರವಿವಾರ ರಾತ್ರಿಯೇ ಆತನನ್ನು ದಿಲ್ಲಿಗೆ ಕರೆ ತರಲಾಗಿದ್ದು. ಅಲ್ಲಿಂದ ತಡರಾತ್ರಿಯೇ ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.

ಕೊಲೆ, ಜೀವ ಬೆದರಿಕೆ, ಸುಲಿಗೆ ಸೇರಿ ಹಲವು ಗಂಭೀರ ಪ್ರಕರಣಗಳಲ್ಲಿ ರವಿ ಪೂಜಾರಿ ಆರೋಪಿಯಾಗಿದ್ದು, ಆತನನ್ನು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮಗಳ ಬಗ್ಗೆ ನಿರ್ಧ ರಿಸಲಾಗುತ್ತದೆ. ಬೆಂಗಳೂರಿನಲ್ಲಿ ವಿಚಾರಣೆ ಮುಗಿದ ಬಳಿಕ ಮಂಗಳೂರು, ಮುಂಬಯಿ ಮತ್ತು ಅನಂತರ ಗುಜರಾತ್‌ಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಛೋಟಾ ರಾಜನ್‌, ದಾವೂದ್‌ ತಂಡದಲ್ಲಿ ಗುರುತಿಸಿ ಕೊಂಡಿದ್ದ ರವಿ ಪೂಜಾರಿ ಮಲೇಷ್ಯಾ, ಆಫ್ರಿಕನ್‌ ದೇಶ ಗಳಲ್ಲಿಯೇ ತಲೆಮರೆಸಿಕೊಂಡಿದ್ದ. ಮಹಾರಾಷ್ಟ್ರ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಗಣ್ಯರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಮಂಡಿಸುತ್ತಿದ್ದ ಪ್ರಕರಣಗಳು ಆತನ ವಿರುದ್ಧ ಇವೆ. ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲೇ 50ಕ್ಕೂ ಹೆಚ್ಚು ಪ್ರಕರಣಗಳಿವೆ. ರವಿ ಪೂಜಾರಿ 2 ದಿನಗಳ ಹಿಂದೆ ಸೆನಗಲ್‌ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳು ಈ ಮಾಹಿತಿ ನೀಡಿದ ಕೂಡಲೇ ರಾಜ್ಯ ಪೊಲೀಸ್‌ ಹಿರಿಯ ಅಧಿಕಾರಿಗಳ ತಂಡ ಆತನನ್ನು ವಶಕ್ಕೆ ಪಡೆಯಲು ದಾಖಲೆಗಳ ಸಹಿತ ಅಲ್ಲಿಗೆ ತೆರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next