Advertisement

ನಟ ರವಿಕಿಶನ್‌ ಪುತ್ರಿ ಇಶಿತಾ ಶುಕ್ಲಾ ಸೇನೆ ಸೇರ್ಪಡೆ

08:34 PM Jun 28, 2023 | Team Udayavani |

ನವದೆಹಲಿ: ಸಿನಿಮಾ ತಾರೆಗಳ ಮಕ್ಕಳು, ರಾಜಕಾರಣಿಗಳ ಮಕ್ಕಳು ಅದೇ ವೃತ್ತಿಗಳಲ್ಲಿ ಮುಂದುವರಿಯುತ್ತಾರೆ ಹೊರತು, ದೇಶಸೇವೆಗೆ ಮುಂದಾಗಲು ಸಾಧ್ಯವೇ ಇಲ್ಲವೆನ್ನುವಂಥ ಮಾತುಗಳಿತ್ತು. ಆದರೀಗ ನಟ, ರಾಜಕಾರಣಿ ರವಿಕಿಶನ್‌ ಪುತ್ರಿ ಇಶಿತಾ ಶುಕ್ಲಾ, ಈ ಮಾತನ್ನು ಸುಳ್ಳಾಗಿಸಿದ್ದು, ಅವರು ಅವರು ಅಗ್ನಿಪಥ ಯೋಜನೆಯಡಿ ಸೇನೆ ಸೇರಿಕೊಂಡಿದ್ದಾರೆ.

Advertisement

ವಿಶೇಷವೆಂದರೆ ಕೇಂದ್ರಸರ್ಕಾರ ರಾಷ್ಟ್ರದ ಯುವಜನತೆಗೆ ದೇಶಸೇವೆ ಸಲ್ಲಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ರೂಪಿಸಿದ್ದ ಅಗ್ನಿಪಥ ಯೋಜನೆ ಅನ್ವಯವೇ ಬಿಜೆಪಿ ನಾಯಕನ ಪುತ್ರಿ ದೆಹಲಿ ಡೈರೆಕ್ಟರೇಟ್‌ನ 7ನೇ ಮಹಿಳಾ ಬೆಟಾಲಿಯನ್‌ ಭಾಗವಾಗಿ ಭದ್ರತಾಪಡೆ ಸೇರಿದ್ದಾರೆ. 21 ವರ್ಷದ ಈ ಯುವತಿಯ ಆಯ್ಕೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರಲ್ಲದೇ, ಮಗಳನ್ನು ಪ್ರೋತ್ಸಾಹಿಸಿದ್ದಕ್ಕಾಗಿ ರವಿಕಿಶನ್‌ರನ್ನೂ ಶ್ಲಾ ಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next