ಅಹಮದಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಸೋಮವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲನುಭವಿಸಿದೆ. ರನ್ ಗಳಿಸಲು ಪರದಾಡಿದ ಪಂಜಾಬ್ ಬ್ಯಾಟ್ಸಮನ್ ಗಳು ಕೂಟದಲ್ಲಿ ಮತ್ತೊಂದು ಸೋಲನುಭವಿಸಿದರು.
ಇದನ್ನೂ ಓದಿ:ಐಪಿಎಲ್ ಮೇಲೆ ಕೊರೊನಾ ಬೌನ್ಸರ್: ಬಿಸಿಸಿಐ ಹೇಳುತ್ತಿರುವುದೇನು?
ಪಂಜಾಬ್ ನೀಡಿದ್ದ 124 ರನ್ ಗಳ ಸುಲಭ ಗುರಿ ಬೆನ್ನತ್ತಿದ್ದ ಕೆಕೆಆರ್ ತಂಡ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮುಂಭಡ್ತಿ ಪಡೆದು ಬಂದ ಸುನೀಲ್ ನರೈನ್ ಬಾರಿಸಿದ ಚೆಂಡು ಆಗಸದೆತ್ತರಕ್ಕೆ ಹಾರಿತ್ತು. ಈ ವೇಳೆ ಡೀಪ್ ಸ್ಕ್ವೇರ್ ನಲ್ಲಿದ್ದ ರವಿ ಬಿಷ್ಣೋಯ್ ಡೀಪ್ ಮಿಡ್ ವಿಕೆಟ್ ಗೆ ಓಡಿ ಬಂದು ಅದ್ಭುತ ಕ್ಯಾಚ್ ಹಿಡಿದರು. ವೇಗವಾಗಿ ಓಡಿ ಬಂದು ಹಾರಿ ಚೆಂಡನ್ನು ಹಿಡಿದ ರೀತಿಗೆ ಎಲ್ಲರಿಂದಲು ಮೆಚ್ಚುಗೆ ವ್ಯಕ್ತವಾಗಿತ್ತು.
ಆದರೆ ಇದಾದ ಕೆಲವೇ ಬಾಲ್ ಗಳ ನಂತರ ರವಿ ಸತತ ಎರಡು ಎಸೆತಗಳಲ್ಲಿ ಎರಡು ಬೌಂಡರಿ ಬಿಟ್ಟುಕೊಟ್ಟರು. ಸುಲಭವಾಗಿ ಹಿಡಿಯಬಹುದಾಗಿದ್ದ ಚೆಂಡನ್ನು ಬಿಟ್ಟು ಎರಡು ಬೌಂಡರಿ ಹೋಗಲು ಕಾರಣರಾದರು. ಅಲ್ಲಿಯವರೆಗೆ ಕೆಕೆಆರ್ ನ ರನ್ ಓಟ ನಿಯಂತ್ರಿಸಿದ್ದ ಪಂಜಾಬ್ ಬೌಲರ್ ಗಳು ಈ ಎರಡು ಫೀಲ್ಡಿಂಗ್ ತಪ್ಪಿನಿಂದ ನಂತರ ಕಷ್ಟಪಡಬೇಕಾಯಿತು.