Advertisement
ವರದಿಯಾದಂತೆ 2 ನೇ ಪತ್ನಿ ಯಶೋಮತಿ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪದಲ್ಲಿ ಸಹುದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಭೀಮಾ ತೀರದ ಹಂತಕನಿಗೆ ಸುಪಾರಿ ನೀಡಿರುವ ವಿಚಾರ ಎಸ್‌ಐಟಿ ಅಧಿಕಾರಿಗಳಿಗೆ ತಿಳಿದು ಬಂದಿದೆ.
Related Articles
Advertisement
ಅಗಸ್ಟ್ 28 ರಂದು ಸುನೀಲ್‌ರನ್ನು ಉತ್ತರ ಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್‌ನಲ್ಲಿ ಶೂಟ್ ಮಾಡಲು ನಿರ್ಧರಿಸಿದ್ದೆ. ಆದರೆ ಸಿಸಿಟಿವಿ ಕಣ್ಗಾವಲು ನೋಡಿ ವಾಪಾಸಾಗಿದ್ದೆ ಎನ್ನುವ ವಿಚಾರವನ್ನು ಬಾಯ್ ಬಿಟ್ಟಿರುವುದಾಗಿ ವರದಿಯಾಗಿದೆ.
ಬೆಳಗೆರೆ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇಂದೇ ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ.
ಎದೆನೋವು ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ,ವಿಚಾರಣೆ ವೇಳೆ ನಡುಗುತ್ತಿದ್ದಾರೆ ಎಂದು ವರದಿಯಾಗಿದೆ.
ಹಕ್ಕುಚ್ಯುತಿ ಆರೋಪದ ಮೇಲೆ ಪತ್ರಕರ್ತ ರವಿ ಬೆಳಗೆರೆಗೆ ಈಗಾಗಲೆ 1 ವರ್ಷ ಜೈಲು ಶಿಕ್ಷೆಯಾಗಿದೆ.
ಪೊಲೀಸರು ಬೆಳಗೆರೆ ಅವರ ನಿವಾಸ ಮತ್ತು ಹಾಯ್ ಬೆಂಗಳೂರು ಕಚೇರಿಯ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅವರ 2 ಕಾರುಗಳ ಪರಿಶೀಲನೆ ವೇಳೆ ರಿವಾಲ್ವರ್ ಮತ್ತು ಡಬಲ್ ಬ್ಯಾರಲ್ ಗನ್ ಪತ್ತೆಯಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲೂ ಬೆಳಗೆರೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.