ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರು ಯಾವಾಗಲೂ ಅದ್ಧೂರಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ತಮ್ಮ ಬರ್ತ್ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ ಅನ್ನೋದು ಅಭಿಮಾನಿಗಳಲ್ಲಿರುವ ಅಭಿಪ್ರಾಯ.
ಆದರೆ ಬಾಲಿವುಡ್ ನಟಿ ರವೀನಾ ಟಂಡನ್ ಮಾತ್ರ ಇಂಥ ಪಾರ್ಟಿ ವಿಷಯದಿಂದ ದೂರ. ಹೌದು, ರವೀನಾ ಟಂಡನ್ ಮಂಗಳವಾರ (ಅ. 26) 47ನೇ ವಸಂತಕ್ಕೆ ಕಾಲಿಟ್ಟಿರು. ಈ ಸಂದರ್ಭದಲ್ಲಿ ಚಿತ್ರೋದ್ಯಮದ ಅನೇಕರು, ಸ್ಟಾರ್, ಅಭಿಮಾನಿಗಳು ರವೀನಾಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು.
ಇದನ್ನೂ ಓದಿ:- ಬೆಲೆ ಏರಿಕೆ: ಸಿಲಿಂಡರ್ ಹೊತ್ತು ಪ್ರತಿಭಟನೆ
ಇನ್ನು ರವೀನಾ ಮಾತ್ರ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಕುಟುಂಬದ ಜೊತೆ ಆಚರಿಸುವ ಕಾರಣದಿಂದ ವಿದೇಶಕ್ಕೆ ಹಾರಿದ್ದಾರೆ. ಮೊದಲಿನಿಂದಲೂ ಅದ್ಧೂರಿ ಪಾರ್ಟಿಗಳು, ಬರ್ತ್ಡೇಯ ಗ್ರ್ಯಾಂಡ್ ಸೆಲೆಬ್ರೇಶನ್ಸ್ನಿಂದ ದೂರವಿರುವ ರವೀನಾ ಬಾಲಿವುಡ್ ಪಾರ್ಟಿಗಳಲ್ಲೂ ಕಾಣಿಸಿಕೊಳ್ಳುವುದು ತೀರ ಅಪರೂಪ.
ಇನ್ನು ಕನ್ನಡದಲ್ಲಿ “ಉಪೇಂದ್ರ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪರಿಚಯವಾಗಿದ್ದ ರವೀನಾ ಟಂಡನ್, ಎರಡು ದಶಕದ ಬಳಿಕ ಈಗ “ಕೆಜಿಎಫ್’ನಲ್ಲಿ ರಮೀಕಾ ಸೇನ್ ಪಾತ್ರದಲ್ಲಿ ಮತ್ತೆ ಕನ್ನಡ ಸಿನಿಪ್ರಿಯರ ಮುಂದೆ ಬರುತ್ತಿದ್ದಾರೆ. ಬರ್ತ್ಡೇ ಸಂಭ್ರಮದಲ್ಲಿರುವ ರವೀನಾಗೆ “ಕೆಜಿಎಫ್ 2′ ಚಿತ್ರತಂಡ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರಿದೆ.