ಆನೇಕಲ್: ಜಂಗಲ್ ಸಫಾರಿ ಹೆಸರಿನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ಯುವಕ ಯುವತಿಯರನ್ನು ಆನೇಕಲ್ ಪೋಲಿಸರು ದಾಳಿ ಮಾಡಿ ಬಂಧಿಸಿದ್ದಾರೆ.
ಆನೇಕಲ್ ಹೊರವಲಯದ ತಮ್ಮನಾಯನಕನಹಳ್ಳಿ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ನಡೆಸಲಾಗುತ್ತಿತ್ತು. ಈ ವೇಳೆ ದಾಳಿ ನಡೆಸಿದ ಪೊಲೀಸರು 11 ಮಂದಿ ಯುವಕ, ಯುವತಿಯರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಪತ್ತೆಯಾಗಿವೆ.
ಇದನ್ನೂ ಓದಿ:ಯಾರಾಗಲಿದ್ದಾರೆ ಪಂಜಾಬ್ ಸಿಎಂ? ಸಿಧು, ಸುನೀಲ್ ಜಾಖರ್, ಅಂಬಿಕಾ ಸೋನಿ ರೇಸ್ ನಲ್ಲಿ
ಯುವಕ ಯುವತಿಯರು ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದರು ಎನ್ನಲಾಗಿದೆ. ಡ್ರಗ್ಸ್ ಪೆಡ್ಲರ್‌ಗಳು, ಡಿಜೆ ಕರೆಸಿ ಜಂಗಲ್ ಸಫಾರಿ ಹೆಸರಿನಲ್ಲಿ ಪಾರ್ಟಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಜಂಗಲ್ ಸಫಾರಿ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಡ್ರಗ್ಸ್ ಪೆಡ್ಲರ್ ಗಳಿಂದ ನೇರವಾಗಿ ಡ್ರಗ್ಸ್ ಖರೀದಿಸಿ ಮೋಜು ಮಸ್ತಿ ಮಾಡಲಾಗುತ್ತಿತ್ತು.