ಚಿರೋಟಿ ರವೆ: 1 ಕಪ್
ಸಕ್ಕರೆ: 1 ಕಪ್
ಸ್ವಲ್ಪ ತುಪ್ಪ
ದ್ರಾಕ್ಷಿ ಗೋಡಂಬಿ
ಏಲಕ್ಕಿ ಪುಡಿ
ಕಾಯಿ ತುರಿ ( 1ಕಪ್ ರವೆಗೆ 1/2 ಹೋಳು ಕಾಯಿತುರಿ)
Advertisement
ತಯಾರಿಸುವ ವಿಧಾನರವೆಯನ್ನು ಸ್ವಲ್ಪ ತುಪ್ಪದೊಂದಿಗೆ ಗೋಡಂಬಿಯ ಜತೆಗೆ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ರವೆ ಪರಿಮಳ ಬಂದ ಕೂಡಲೇ ಅದಕ್ಕೆ ಕಾಯಿ ತುರಿ ಹಾಕಿ ಮೂರು ನಿಮಿಷಗಳ ಕಾಲ ಹುರಿಯಿರಿ.ಸಕ್ಕರೆಯನ್ನು ಪುಡಿ ಮಾಡಿಕೊಳ್ಳಿ.ರವೆ ಬಿಸಿ ಇರುವಾಗಲೇ ಅದಕ್ಕೆ ಸಕ್ಕರೆ ಪುಡಿ,ದ್ರಾಕ್ಷಿ,ಏಲಕ್ಕಿ ಪುಡಿ ಬೆರೆಸಿ.ಸ್ವಲ್ಪ ಹಾಲನ್ನು ಮೇಲೆ ಚುಮುಕಿಸಿ ಹದವಾಗಿ ಕಲೆಸಿಕೊಳ್ಳಿ (ಹಾಲು ಉಂಡೆ ಕಟ್ಟಲು ಬೇಕಾದಷ್ಟು ಮಾತ್ರ ಹಾಕಿ) ಗುಂಡಾದ ಉಂಡೆಗಳನ್ನು ಕಟ್ಟಿ ರವೆ ಉಂಡೆ ತಿನ್ನಲು ಕೊಡಿ .