ಹವಾನಾ: ಕ್ಯೂಬಾ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ತ್ಯಜಿಸುವುದಾಗಿ ರೌಲ್ ಕ್ಯಾಸ್ಟ್ರೋ (89) ತಿಳಿಸಿದ್ದಾರೆ.
ಇದರಿಂದಾಗಿ ಆರು ದಶಕಗಳಲ್ಲಿಯೇ ಮೊದಲ ಬಾರಿಗೆ ಕ್ಯೂಬಾದ ಆಡಳಿತ ವಹಿಸಿಕೊಂಡ ಪಕ್ಷದಲ್ಲಿ ಮೊದಲ ಬಾರಿಗೆ ಯುವ ಪೀಳಿಗೆಯ ನಾಯಕತ್ವಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಆ ದೇಶದ ಸರ್ಕಾರದ ಮುಖ್ಯಸ್ಥರ ಹುದ್ದೆಯಲ್ಲಿ ಕ್ಯಾಸ್ಟ್ರೋ ಕುಟುಂಬಸ್ಥರ ಆಳ್ವಿಕೆಯೂ ಕೊನೆಗೊಂಡಿದೆ.
ಎಲ್ಲಾ ರೀತಿಯ ಹುದ್ದೆಗಳನ್ನು ತ್ಯಜಿಸಿದ್ದೇನೆ ಮತ್ತು ಅವುಗಳನ್ನು ಹೊಂದಿದ್ದ ಸಮಯದಲ್ಲಿ ಸೂಕ್ತವಾಗಿ ನಿಭಾಯಿಸಿದ್ದೇನೆ ಎಂಬ ತೃಪ್ತಿ ಇದೆ ಎಂದು ರೌಲ್ ಕ್ಯಾಸ್ಟ್ರೋ ಹೇಳಿದ್ದಾರೆ.
ಆದರೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾರನ್ನು ಹೆಸರಿಸಲಾಗುತ್ತದೆ ಎಂಬ ಬಗ್ಗೆ ಅವರು ಪ್ರಸ್ತಾಪಿಸಿಲ್ಲ.
ಇದನ್ನೂ ಓದಿ :ಪ್ರಧಾನಿ ಮೋದಿ ಮಾತಿಗೆ ಮನ್ನಣೆ : ಕುಂಭಮೇಳ ಅಂತ್ಯ