ಡಾಲಿ ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ನಟಿಸಿರುವ ರತ್ನನ ಪ್ರಪಂಚ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಇದೀಗ ವರಮಹಾಲಕ್ಷ್ಮೀ ಹಬ್ಬದ ಉಡುಗೊರೆಯಾಗಿ ಟ್ರೈಲರ್ ರಿಲೀಸ್ ಆಗಿದೆ.
ಎರಡು ನಿಮಿಷ ಮೂವತ್ತು ಸೆಕೆಂಡ್ ಗಳ ಟ್ರೈಲರ್ ‘ರತ್ನನ ಪ್ರಪಂಚ’ದ ಮೇಲೆ ನಿರೀಕ್ಷೆ ಹೆಚ್ಚಿಸುವಂತಿದೆ. ಟ್ರೈಲರ್ ನಲ್ಲಿ ಬರುವ ಡಾಲಿ ಧನಂಜಯ್, ಉಮಾಶ್ರೀ, ಶೃತಿ, ನಾಯಕಿ ರೆಬಾ, ರವಿಶಂಕರ್ ಗೌಡ, ಅನು ಪ್ರಭಾಕರ್, ಪ್ರಮೋದ್ ಅವರ ಪಾತ್ರಗಳು ನೋಡುಗರ ಗಮನ ಸೆಳೆಯುತ್ತವೆ. ಮತ್ತೆ ಮತ್ತೆ ನೋಡಬೇಕೆನ್ನಿಸುವ ರತ್ನನ ಪ್ರಪಂಚದ ಟ್ರೈಲರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದು, ನಟ ರಕ್ಷಿತ್ ಶೆಟ್ಟಿಯವರು ಮೆಚ್ಚಿ ಟ್ವೀಟ್ ಮಾಡಿದ್ದಾರೆ.
ಇನ್ನು ಬಹುತೇಕ ಸಿನಿಮಾಗಳಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ‘ಡಾಲಿ’ ಧನಂಜಯ್ ‘ರತ್ನನ್ ಪಪಂಚ’ ಸಿನಿಮಾದಲ್ಲಿ ಸಖತ್ ಕ್ಲಾಸ್ ಆಗಿದ್ದಾರೆ.
Related Articles
ರೋಹಿತ್ ಪದಕಿಯ ಅವರ ನಿರ್ದೇಶನದ “ರತ್ನನ್ ಪ್ರಪಂಚ” ಮೂಲಕ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಈ ಹಿಂದೆ “ಲವ್ ಯು ಆಲಿಯಾ” ಚಿತ್ರದಲ್ಲಿ ಕಡೆಬಾರಿಗೆ ನಟಿಸಿದ್ದ ಉಮಾಶ್ರೀ ಐದು ವರ್ಷಗಳ ನಂತರ ಮತ್ತೆ ಸಿನಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
“ರತ್ನನ್ ಪ್ರಪಂಚ” ಚಿತ್ರಕ್ಕೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಬಂಡವಾಳ ತೊಡಗಿಸಿದ್ದಾರೆ.