Advertisement

Sandalwood: ಅಪ್ಪು ಸುತ್ತ ರತ್ನ: ಅಭಿಮಾನಿಯ ಕಥೆಯಿದು

05:29 PM Mar 20, 2024 | Team Udayavani |

ಬಸವರಾಜ್‌ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ’ ಚಿತ್ರದ ಟ್ರೇಲರ್‌ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಬಸವರಾಜ್‌, “ನಾನು ಸೀನ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಸೀನ ಚಿತ್ರಕ್ಕೆ ಆರಂಭ ಫ‌ಲಕ ತೋರುವ ಮೂಲಕ ಚಾಲನೆ ನೀಡಿದ್ದು, ಪುನೀತ್‌ ರಾಜಕುಮಾರ್‌ ಅವರೇ.

Advertisement

ಆನಂತರ ಚಿತ್ರೀಕರಣದ ವೇಳೆ ಕೆಲವು ತೊಂದರೆ ಬಂದಾಗ ನಿವಾರಣೆ ಮಾಡಿದ್ದು ಕೂಡ ಅವರೇ.ರತ್ನ ಚಿತ್ರ ಅಪ್ಪು ಅವರಿಗಾಗಿಯೇ ಮಾಡಿರುವ ಚಿತ್ರ. ಅವರನ್ನು ದೇವರಂತೆ ಆರಾಧಿಸುವ ಅವರ ಅಭಿಮಾನಿಯ ಕುರಿತಾದ ಚಿತ್ರವಿದು. ನಮ್ಮ ಚಿತ್ರದ ನಾಯಕಿಯ ಪಾತ್ರದ ಹೆಸರು ರತ್ನ. ಆಕೆಗೆ ಅಪ್ಪು ಅವರೆ ಆರಾಧ್ಯ ದೈವ. ಪುನೀತ್‌ ರಾಜಕುಮಾರ್‌ ಅವರನ್ನು ಭೇಟಿಯಾಗಬೇಕೆಂಬ ಹಂಬಲ ಆಕೆಯದು. ಈ ರೀತಿ ಚಿತ್ರದ ಕಥೆ ಸಾಗುತ್ತದೆ. ಏಪ್ರಿಲ್‌ 26 ಚಿತ್ರ ತೆರೆಗೆ ಬರಲಿದೆ’ ಎಂದರು.

“ನಾನು ಈ ಚಿತ್ರದಲ್ಲಿ ನಿರ್ದೇಶಕನ ಪಾತ್ರ ಮಾಡಿದ್ದೇನೆ. ನಾನು ಸಹ ಪುನೀತ್‌ ರಾಜಕುಮಾರ್‌ ಅವರ ಅಪ್ಪಟ್ಟ ಅಭಿಮಾನಿ. ಅವರ ಕುರಿತಾದ ಈ ಚಿತ್ರದಲ್ಲಿ ನಟಿಸಿರುವುದು ಸಂತೋಷವಾಗಿದೆ’ ಎನ್ನುವುದು ನಾಯಕ ವರ್ಧನ್‌ ಮಾತು. ವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟ ಹಾಗೂ ಸಂಕಲನಕಾರ ನಾಗೇಂದ್ರ ಅರಸ್‌ ಹೇಳಿದರು.

ಚಿತ್ರದಲ್ಲಿ ನನ್ನದು ನಟನ ಪಾತ್ರ ಎಂದು ಅಮಿತ್‌ ರಾವ್‌ ತಿಳಿಸಿದರು. ಆನಂದ್‌ ಅಪ್ಪು, ಸುಚೇತ್‌ ಹಾಗೂ ಸಹ ನಿರ್ಮಾಪಕರಾದ ಮಂಜುನಾಥ್‌, ರಾಘವೇಂದ್ರ ಕರೂರ್‌ ಮುಂತಾದವರು ರತ್ನ ಚಿತ್ರದ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next