Advertisement

ರೇಷನಿಂಗ್‌ ಸ್ಥಗಿತ : ಖಾಸಗಿ ಟ್ಯಾಂಕರ್‌ಗೆ ಬೇಡಿಕೆ ಇಳಿಕೆ

05:36 PM Apr 27, 2019 | Suhan S |

ಮಹಾನಗರ, ಎ. 26: ಕುಡಿಯುವನೀರು ಪೂರೈಕೆಯಾಗದ ಎತ್ತರದ ಪ್ರದೇಶಗಳಿಗೆ ಪಾಲಿಕೆ ವತಿಯಿಂದಟ್ಯಾಂಕರ್‌ ಮೂಲಕ ನೀರು ಪೂರೈಕೆಮುಂದುವರಿದಿದೆ. ಆದರೆ ನಗರಉಳಿದ ಭಾಗಗಳಿಗೆ ಎರಡುದಿನಗಳಿಂದ ರೇಷನಿಂಗ್‌ ವ್ಯವಸ್ಥೆರದ್ದುಪಡಿಸಿದ ಕಾರಣ ಖಾಸಗಿಟ್ಯಾಂಕರ್‌ ನೀರಿನ ಬೇಡಿಕೆ ಸ್ವಲ್ಪ ಮಟ್ಟಿಗೆಕಡಿಮೆಯಾಗಿದೆ.

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯಹಲವು ಪ್ರದೇಶಗಳಿಗೆ ನಾನಾಕಾರಣಗಳಿಂದಾಗಿ ಸರಿಯಾಗಿ ನೀರುಪೂರೈಕೆಯಾಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜನರು ಟ್ಯಾಂಕರ್‌ನೀರಿನ ಮೊರೆ ಹೋಗು ತ್ತಾರೆ. ಪಾಲಿಕೆ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಿದರೂ ಅದು ಸಾಕಾಗದೆ ಖಾಸಗಿಟ್ಯಾಂಕರ್‌ಗಳಿಂದ ತರಿಸಿಕೊಳ್ಳುತ್ತಾರೆ. ರೇಷನಿಂಗ್‌ ವ್ಯವಸ್ಥೆ ಜಾರಿಯಾದಾಗ ಈ ಸಮಸ್ಯೆ ಹೆಚ್ಚಿತ್ತು.ಉಳಿದಂತೆ ಬೇಸಗೆಯಲ್ಲಿಸಭೆ, ಸಮಾರಂಭಗಳು ಹೆಚ್ಚುಇರುವುದರಿಂದ ಸಂಬಂಧಪಟ್ಟವರುಹೆಚ್ಚುವರಿಯಾಗಿ ಖಾಸಗಿ ಟ್ಯಾಂಕರ್‌ನೀರಿಗೆ ಮೊರೆ ಹೋಗುತ್ತಿದ್ದಾರೆ. ಆ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಬದಲಾಗಿ ಬೇಡಿಕೆ ಹೆಚ್ಚುತ್ತಿದೆ.

ಸ್ವಂತ ವ್ಯವಸ್ಥೆಗಳಿಲ್ಲ:

ಮಹಾನಗರ ಪಾಲಿಕೆಗೆ ತನ್ನದೇ ಆಸ್ವಂತ ನೀರಿನ ಟ್ಯಾಂಕರ್‌ ವ್ಯವಸ್ಥೆಯಿಲ್ಲ. ಆವಶ್ಯಕತೆಗೆ ತಕ್ಕಂತೆ ಖಾಸಗಿ ಟ್ಯಾಂಕರ್‌ ಗಳನ್ನು ಬಾಡಿಗೆಗೆ ಪಡೆದು ಉಚಿತವಾಗಿ ನೀರು ಸರಬರಾಜು ಮಾಡುತ್ತಿದೆ. ಪಾಲಿಕೆ ವತಿಯಿಂದ ಈ ಹಿಂದೆ ತಲಾ6,000 ಲೀಟರ್‌ ಸಾಮರ್ಥಯದ ಮೂರು ಟ್ಯಾಂಕರ್‌ ಹಾಗೂ 3,000 ಲೀಟರ್‌ ಸಾಮರ್ಥಯದ 1 ಟ್ಯಾಂಕರ್‌ ಅನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಪೈಕಿ 6,000 ಲೀಟರ್‌ನ 2ಟ್ಯಾಂಕರ್‌ ಮತ್ತು 3,000 ಲೀಟರ್‌ನ 1 ಟ್ಯಾಂಕರ್‌ ಮಂಗಳೂರು ವ್ಯಾಪ್ತಿಯಲ್ಲಿ (42 ವಾರ್ಡ್‌ಗಳಿಗೆ) ಹಾಗೂ 6,000 ಲೀಟರ್‌ನ ಒಂದು ಟ್ಯಾಂಕರ್‌ ಸುರತ್ಕಲ್‌ ಪ್ರದೇಶದಲ್ಲಿ (18 ವಾರ್ಡ್‌ ಗಳಿಗೆ) ನೀರು ಪೂರೈಕೆ ಮಾಡುವ ಕಾರ್ಯದಲ್ಲಿ ನಿರತವಾಗಿತ್ತು.

ಈಗ ರೇಷನಿಂಗ್‌ ವ್ಯವಸ್ಥೆ ಅನುಷ್ಠಾನಗೊಂಡ ಬಳಿಕ ಮಂಗಳೂರಿಗೆ 6,000 ಲೀಟರ್‌ ಮತ್ತು 3,000 ಲೀಟರ್‌ನ ತಲಾ ಒಂದುಟ್ಯಾಂಕರ್‌ ಸೇರ್ಪಡೆಗೊಂಡಿದೆ. ಸುರತ್ಕಲ್‌ ಪ್ರದೇಶಕ್ಕೆ 6,000ಲೀಟರ್‌ನ ಒಂದು ಟ್ಯಾಂಕರ್‌ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ.ಪ್ರಸ್ತುತ ಮಂಗಳೂರಿನಲ್ಲಿ ಒಟ್ಟು 5 ಹಾಗೂ ಸುರತ್ಕಲ್‌ನಲ್ಲಿ 2 ಟ್ಯಾಂಕರ್‌ಸಹಿತ ಒಟ್ಟು 7 ಟ್ಯಾಂಕರ್‌ಗಳನ್ನು ಪಾಲಿಕೆಯು ನೀರು ಸರಬರಾಜಿಗೆ ಬಳಕೆ ಮಾಡುತ್ತಿದೆ.

Advertisement

ಟೆಂಡರ್‌ ದರ ನಿಗದಿ :

ಟ್ಯಾಂಕರ್‌ ನೀರು ಪೂರೈಕೆಗೆ ಸಂಬಂಧಿಸಿ ಪಾಲಿಕೆಯುಖಾಸಗಿಯವರಿಗೆ ಈ ಹಿಂದೆ ಕರೆದಟೆಂಡರ್‌ನಂತೆ ಹಣ ಪಾವತಿಸುತ್ತಿದೆ. 6,000 ಲೀಟರ್‌ ಸಾಮರ್ಥಯದಟ್ಯಾಂಕರ್‌ಗೆ 900 ರೂ. ಗಳನ್ನು ಹಾಗೂ 3,000 ಲೀ. ಸಾಮರ್ಥಯದ ಟ್ಯಾಂಕರ್‌ ಗೆ 600 ರೂ.ಗಳನ್ನು ಪ್ರತಿ ಟ್ರಿಪ್‌ಗೆ ಪಾವತಿಸುತ್ತಿದೆ. ಪ್ರಸ್ತುತ ಪ್ರತಿ ಟ್ಯಾಂಕರ್‌ದಿನಕ್ಕೆ ಸರಾಸರಿ 9ರಿಂದ 10 ಟ್ರಿಪ್‌ ನೀರು ಸಾಗಾಟ ಮಾಡುತ್ತಿದೆ.

 

ಎಲ್ಲೆಲ್ಲಿ ಟ್ಯಾಂಕರ್‌ ಪೂರೈಕೆ:

ಕೆಲವು ಎತ್ತರದ ಪ್ರದೇಶಗಳಿಗೆಮತ್ತು ತಾಂತ್ರಿಕ ಸಮಸ್ಯೆಗಳಿರುವ ಕೆಲವು ಪ್ರದೇಶಗಳಿಗೆ ಪಾಲಿಕೆ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಪ್ಪಿನಮೊಗರು ಸ್ಮಶಾನ ಗುಡ್ಡೆ, ಉರ್ವ ಮಾರ್ಕೆಟ್‌ ಆಸುಪಾಸಿನ ಕೆಲವು ಪ್ರದೇಶಗಳು, ಚಿಲಿಂಬಿ ಗುಡ್ಡೆ, ಮಂಗಳಾದೇವಿಯ ದೇವರಾಜ ಕಾಂಪೌಂಡ್‌ ಟ್ಯಾಂಕರ್‌ ಮೂಲಕನೀರು ಸರಬರಾಜು ಆಗುವ ಕೆಲವು ಪ್ರಮುಖ ಪ್ರದೇಶಗಳು.ಇದರ ಹೊರತಾಗಿ ಆಸ್ಪತ್ರೆಗಳು,ಶಾಲಾ- ಕಾಲೇಜುಗಳು, ಹಾಸ್ಟೆಲ್‌ಗ‌ಳು, ಸಭೆ ಸಮಾರಂಭಗಳಿಗೆ ಪಾಲಿಕೆಯವತಿಯಿಂದ ಆವಶ್ಯಕತೆ ಮತ್ತು ಬೇಡಿಕೆ ಪರಿಶೀಲಿಸಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ವಾಲ್ಟ್ ಮೆನ್ ಗೆ ಜವಾಬ್ದಾರಿ ಟ್ಯಾಂಕರ್‌ ಮೂಲಕ ಪೂರೈಕೆ  ಮಾಡುವ ನೀರು ಅರ್ಹ ಜನರಿಗೆ ತಲಪುವುದನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಪಾಲಿಕೆಯು ಮುಂಜಾಗ್ರತೆ ವಹಿಸಿದ್ದು,ಈ ನಿಟ್ಟಿನಲ್ಲಿ ಟ್ಯಾಂಕರ್‌ ನೀರಿಗೆ ಬೇಡಿಕೆ ಬಂದಾಗ ಸಂಬಂಧಪಟ್ಟ ಪ್ರದೇಶದ ವಾಲ್ಟ್ ಮೆನ್ ಜತೆಗೆ ಟ್ಯಾಂಕರ್‌ ನೀರನ್ನು ಕಳುಹಿಸಿಕೊಡುತ್ತಿದೆ. ನಿಜವಾಗಿಯೂ ನೀರುಇಲ್ಲದ ಕುಟುಂಬಗಳಿಗೆ ನೀರು ವಿತರಣೆ ಆಗುವಂತೆ ನೋಡಿಕೊಳ್ಳುವುದು ವಾಲ್ಟ್ ಮೆನ್  ಜವಾಬ್ದಾರಿ

ಫಿಲ್ಲಿಂಗ್ ಪಾಯಿಂಟ್ : ಪಾಲಿಕೆ ವತಿಯಿಂದ ನೀರುಸರಬರಾಜು ಮಾಡುವ ಟ್ಯಾಂಕರ್‌ಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಅಭಾವ ಇಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಲ್ಲಿಂಗ್‌ಪಾಯಿಂಟ್‌ಗಳಿದ್ದು, ಅಲ್ಲಿಂದ ಟ್ಯಾಂಕರ್‌ ಗಳಿಗೆ ನೀರು ತುಂಬಿಸಲಾಗುತ್ತಿದೆ.ಲ್ಲಿಂಗ್‌ ಪಾಯಿಂಟ್‌ಗಳಲ್ಲಿ ನೀರಿನ ಕೊರತೆ ಕಂಡು ಬಂದರೆ ಮಾತ್ರ ಪರ್ಯಾಯ ಮೂಲಗಳನ್ನು ಹುಡುಕ ಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿತೆರೆದ ಬಾವಿ ಮತ್ತು ಕೊಳವೆ ಬಾವಿಗಳ ಮೊರೆ ಹೋಗ ಬೇಕಾಗುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ 135 ಸರಕಾರಿಕೊಳವೆ ಬಾವಿ ಮತ್ತು 42 ಸರಕಾರಿ ತೆರೆದಬಾವಿಗಳಿವೆ.

ಖಾಸಗಿ ಟ್ಯಾಂಕರ್‌ ವ್ಯವಸ್ಥೆ: ಕೆಲವು ಮಂದಿ ಮನೆ/ ಫ್ಲಾಟ್‌/ಹೊಟೇಲ್‌ಗ‌ಳವರು ತಾವೇ ಹಣ ಕೊಟ್ಟುಖಾಸಗಿಯವರಿಂದ ನೀರು ತರಿಸುತ್ತಾರೆ. ಮಂಗಳೂರಿನಲ್ಲಿ ನೀರು ಸರಬರಾಜುಮಾಡುವ ಸುಮಾರು 100- 125ರಷ್ಟು ಟ್ಯಾಂಕರ್‌ಗಳಿವೆ. ಖಾಸಗಿಯವರು 6,000 ಲೀಟರ್‌ ಸಾಮರ್ಥ್ಯದ ಒಂದು ಟ್ಯಾಂಕರ್‌ನೀರಿಗೆ 1,000 ರೂ.ಗಳಿಂದ 1,200 ರೂ. ತನಕ ಪಡೆಯುತ್ತಾರೆ. 3,000 ಲೀ. ನಿಂದ 12,000 ಲೀ. ವರೆಗಿನ ಸಾಮರ್ಥ್ಯದ ಟ್ಯಾಂಕರ್‌ಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next