Advertisement

ಇಂದಿನಿಂದಲೇ ಎಪ್ರಿಲ್ ಮತ್ತು ಮೇ ಎರಡು ತಿಂಗಳ ಪಡಿತರ ವಿತರಣೆ

09:15 AM Apr 02, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಲಾಕ್ ಡೌನ್ ಇರುವುದರಿಂದ ಎಪ್ರಿಲ್ ಮತ್ತು ಮೇ ಎರಡೂ ತಿಂಗಳ ಪಡಿತರವನ್ನು ವಿತರಣೆಯಾಗಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು  ಸಚಿವ ಕೆ  ಗೋಪಾಲಯ್ಯ ಹೇಳಿದರು.

Advertisement

ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಇಂದಿನಿಂದಲೇ ವಿತರಣೆಯಾಗಲಿದೆ. ಏಪ್ರಿಲ್ 10ರ ಒಳಗೆ ರಾಜ್ಯದ ಪಡಿತರ ವಿತರಣೆ ಪೂರ್ಣಗೊಳಿಸುವ ಗುರಿ‌ ಇದೆ ಎಂದರು.

ಕಡುಬಡವರ ಅಂತ್ಯೋದಯ ಕಾರ್ಡು ದಾರರಿಗೆ ಎರಡು ತಿಂಗಳ 70 ಕೆಜಿ ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಯೂನಿಟ್ ಗೆ 5 ಕೆಜಿ ಅಕ್ಕಿ, ಪ್ರತಿ ಕಾರ್ಡಿಗೆ 2 ಕೆಜಿ ಗೋಧಿ ವಿತರಣೆಯಾಗಲಿದೆ ಇನ್ನು ಓಟಿಪಿ ವಿಚಾರ ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು ಎಂದರು.

ಏಪ್ರಿಲ್ 10ರ ನಂತರ ಕೇಂದ್ರ ಸರ್ಕಾರದ ಪಡಿತರ ಪ್ಯಾಕೇಜ್ ವಿತರಣೆ ಶುರುವಾಗಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ‌ ಇಂದೇ ಪಡಿತರ ವಿತರಣೆ ಶುರುವಾಗಲಿದೆ. ಹಳ್ಳಿಗಳಲ್ಲಿ ವಿತರಣೆಗೆ ಎರಡು ದಿನ ಸಮಯ ಬೇಕಾಗಬಹುದು ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next