ಪಿರಿಯಾಪಟ್ಟಣ: ಬಡವರ ಅನ್ನ ಕಸಿಯುವುದಾಗಲಿ, ತೂಕದಲ್ಲಿ ವ್ಯತ್ಯಾಸ ಹಾಗೂ ಪಡಿತರ ಪದಾರ್ಥಗಳನ್ನು ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟರೆ ಅಂತಹ ನ್ಯಾಯಬೆಲೆ ಅಂಗಡಿ ಪರಾವನಗಿಯನ್ನು ರದ್ದು ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೆಶಕಿ ಕುಮುದ ಶರತ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಭವನದ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿದರು.
ಸಮಾಜದ ಎಲ್ಲಾ ವರ್ಗದ ಜನರಿಗೂ ಆಹಾರ ಭದ್ರತೆ ಹಾಗೂ ಬಡತನ ರೇಖೆಗಿಂತ ಕೆಳಗರುವ ಕುಟುಂಬಗಳಿಗೆ ಆಸರೆಯಾಗುವ ಉದ್ದೇಶದಿಂದ ಸರ್ಕಾರ ಪಡಿತರ ವ್ಯವಸ್ತೆಯನ್ನು ಜಾರಿಗೊಳಿಸಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ಎಲ್ಲಿಯೂ ದೂರ ಬಾರದ ರೀತಿಯಲ್ಲಿ ವಿತರಣೆ ಮಾಡಬೇಕು ಹಾಗೂ ಕಾರ್ಡುದಾರರೊಂದಿಗೆ ಉತ್ತಮ ಭಾಂದವ್ಯ ಇಟ್ಟುಕೊಳ್ಳಬೇಕು, ಕುಟುಂಬದ ಮುಖ್ಯಸ್ಥ ಮರಣ ಹೊಂದಿದ ಕೂಡಲೇ ತುರ್ತಾಗಿ ಇಲಾಖೆಗೆ ಮಾಹಿತಿಯನ್ನು ನೀಡಿ, ಮನೆಯ ಹಿರಿಯ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರನ್ನಾಗಿ ಪಡಿತರ ಚೀಟಿಯಲ್ಲಿ ನಮೂದು ಮಾಡಬೇಕು. ಕುಟುಂಬದ ಸದಸ್ಯರು ಹೆಸರು ಕೈ ಬಿಟ್ಟು ಹೋಗಿದ್ದರೆ ಕೂಡಲೇ ಅದನ್ನು ಕೇಂದ್ರ ಕಚೇರಿಗೆ ತಿಳಿಸಿ ಹೆಸರನ್ನು ಮರು ನೇಮಕ ಮಾಡಲು ತಿಳಿಸಬೇಕು. ಪಡಿತರ ವಿತರಣ ವಿಷಯವಾಗಿ ದೂರುಗಳು ಮತ್ತು ಆರೋಪಗಳು ಬಾರದ ರೀತಿಯಲ್ಲಿ ಎಚ್ಚರ ವಹಿಸಬೇಕು, ಬಿಪಿಎಲ್ ಕಾರ್ಡುದಾರರು ಅಂತ್ಯೋದಯಕ್ಕೆ ಕಾರ್ಡಾಗಿ ಕನ್ವರ್ಟ್ ಮಾಡಿದ್ದರೆ ಅಂತರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು, ಪಡಿತರ ಚೀಟಿಯಲ್ಲಿ ಅನರ್ಹರು ಹಾಗೂ ಸರ್ಕಾರಿ ನೌಕರರು ಸೇರಲ್ಪಟ್ಟಿದ್ದರೆ ಅವರ ಬಗ್ಗೆ ಮಾಹಿತಿ ನೀಡಬೇಕು. ನಿಗದಿತ ಸಮಯಕ್ಕೆ ಪಡಿತರ ಸಾಮಾಗ್ರಿಗಳನ್ನು ವಿತರಣೆ ಮಾಡಬೇಕು. ಮುಂದಿನ ಏಪ್ರಿಲ್ ತಿಂಗಳಿನಿಂದ ಪಡಿತರ ವಿತರಣೆಯಲ್ಲಿ ಗೋಧಿ ನೀಡುವ ಬದಲಾಗಿ ಪ್ರತಿ ಸದಸ್ಯರಿಗೆ 6 ಕೆ.ಜಿ.ಅಕ್ಕಿ ನೀಡಲಾಗುವುದು ಎಂದರು.
ತಹಶೀಲ್ದಾರ್ ಚಂದ್ರಮೌಳಿ ಮಾತನಾಡಿ ಒನ್ ನೇಷನ್ ಒನ್ ರೇಷನ್ ಮೂಲಕ ಕಾರ್ಡುದಾರರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಯಾವುದೇ ಗೊಂದಲ ಘರ್ಷಣೆಗೆ ಅವಕಾಶ ನೀಡದೆ, ಪಡಿತರ ಆಹಾರ ಸಾಮಾಗ್ರಿಗಳನ್ನು ನಿಗಿದತ ಸಮಯಕ್ಕೆ ವಿತರಣೆ ಮಾಡಲಾಗುತ್ತಿದೆ ಈ ವಿಷಯವಾಗಿ ತಾಲ್ಲೂಕಿನಲ್ಲಿ ಈ ವರೆಗೂ ಯಾವುದೇ ದೂರುಗಳು ಬಂದಿಲ್ಲ, ನಾನು ರಾಜ್ಯದ ನಾನಾ ತಾಲೂಕುಗಳಲ್ಲಿ ಕೆಲಸ ನಿರ್ವಹಸಿದ್ದು, ಪಿರಿಯಾಪಟ್ಟಣದಲ್ಲಿ ಗ್ರಾಹಕರಿಗೆ ವಿಳಂಬ ಧೋರಣೆ ತೋರದೆ ಸರ್ಕಾರದ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಸಣ್ಣಸ್ವಾಮಿ, ಮಂಜುನಾಥ್, ಸಂದೀಪ್, ಪಿರಿಯಾಪಟ್ಟಣ ತಾಲ್ಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮಣೇಗೌಡ ಕಾರ್ಯದರ್ಶಿ ಜನಾರ್ಧನ್, ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಜರಿದ್ದದರು.
05ಪಿವೈಪಿ01:ಪಟ್ಟಣದ ತಾಲ್ಲೂಕು ಆಡಳಿತ ಭವನದ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ನ್ಯಾಯ ಬೆಲೆಅಂಗಡಿ ಮಾಲೀಕರ ಸಭೆಯಲ್ಲಿ ಇಲಾಖೆಯ ಜಂಟಿ ನಿರ್ದೆಶಕಿ ಕುಮುದ ಶರತ್ ಮಾತನಾಡಿದರು.