ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಣವಂತರಿಗಿಂತ ಹೃದಯವಂತರಿದ್ದಾರೆ ಎಂದು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದ ವತಿಯಿಂದ ಸೋಮವಾರ ನಗರದಖಾಸಗಿಹೋಟೆಲ್ ನಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ವಕೀಲರಿಗೆ ದಿನಸಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ ಸಂಕಷ್ಟದ ಸಮಯದಲ್ಲಿ ಸಂಘ-ಸಂಸ್ಥೆ ಗಳವರು ಅಧಿಕಾರಿಗಳ ಜೊತೆಗೆ ಕೈ ಜೋಡಿಸಿ ಕೆಲಸ ಮಾಡುತ್ತಿರುವುದೇ ಮೈಸೂರಿನಲ್ಲಿ ಹಣವಂತರಿಗಿಂತ ಹೃದಯವಂತರಿದ್ದಾರೆ ಎಂಬುದಕ್ಕೆ ಸಾಕ್ಷಿ. ಸಂಘ- ಸಂಸ್ಥೆಗಳವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೊರೊನಾ ಸಮಯದಲ್ಲಿ ನಗರ ಪಾಲಿಕೆ ವತಿಯಿಂದ ಹೊಸದಾಗಿ ಶುರುವಾಗಿರುವ ಕಾರ್ಯಕ್ರಮಗಳಾಗಿ ರುವಕೋವಿಡ್ ಮಿತ್ರ, ವಾತ್ಸಲ್ಯ, ಸಾಂತ್ವನ, ಟೆಲಿ ಕೇರ್, ಮನೆ ಮನೆ ಸಮೀಕ್ಷೆ ಇದರಲ್ಲಿ ಅಧಿಕಾರಿಗಳ ಜೊತೆಗೆ ನಾಗರಿಕ ಸಮಾಜ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಬಹಳ ದೊಡ್ಡ ಮಟ್ಟದಲ್ಲಿ ಭಾಗವಹಿಸುತ್ತಿದ್ದಾರೆ. ನಾನು ಕರೆ ಮಾಡಿ ಸಂಕಷ್ಟದಲ್ಲಿರುವವರಿಗೆ 100 ಊಟ ಬೇಕುಅಂತ ಹೇಳಿದರೆ ಸಾಕು 5 ನಿಮಿಷದಲ್ಲಿ ತಯಾರಾಗುತ್ತೆ. ಈ ರೀತಿ ಎಲೆ ಮರೆಯಲ್ಲಿ ತುಂಬ ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ವಕೀಲರಿಗೆ ದಿನಸಿ ವಿತರಿಸಲಾಗುತ್ತಿದೆ. ಇದು ನನ್ನ ಸೇವೆಯಲ್ಲಿ ಮರೆಲಾರದ ಅನುಭವವಾಗುತ್ತೆ. ಇಂತಹ ಅನುಭವ ಮುಂದೆ ಆಗುವುದಿಲ್ಲ. ಸಂಘ-ಸಂಸ್ಥೆಗಳವರು ಒಂದಷ್ಟು ಹಣ ನೀಡಿ ಸುಮ್ಮನಾಗುತ್ತಿಲ್ಲ. ನಮ್ಮ ಜೊತೆ ನಿಂತು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪಾಲಿಕೆಯಿಂದ ಧನ್ಯವಾದ ತಿಳಿಸುತ್ತೇನೆ. ಆದಷ್ಟು ಬೇಗ ಕೊರೊನಾ ಮುಕ್ತರಾ ಗೋಣ. ನಾವು ಏನೇ ಕೆಲಸ ಮಾಡುತ್ತಿದ್ದರೂ ಸೋಂಕನ್ನು ಹಾಗೂ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಕೆಲಸ ಮಾಡುತ್ತಿದ್ದೇವೆ ಎಂದರು.
ಡಿಸಿಪಿ ಪ್ರಕಾಶ್ ಗೌಡ ಮಾತನಾಡಿ, ಕೋವಿಡ್ ದಿಂದಾಗಿ 159 ಮಂದಿ ವಕೀಲರು ಸಾವನ್ನಪ್ಪಿದ್ದಾರೆ. ಇದು ನೋವಿನ ಸಂಗತಿ. ದಯವಿಟ್ಟು ಎಲ್ಲರೂ ಜಾಗೃತೆ ವಹಿಸಿ,ಕೋವಿಡ್ ನಿಯಮಗಳನ್ನು ಪಾಲಿಸಿ ಎಂದರು. ಇದೇ ವೇಳೆ 560 ಮಂದಿಗೆ ದಿನಸಿ ಕಿಟ್ ವಿತರಿಸಲಾಯಿತು. ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಕುಟುಂಬದವರಿಗೆ ಟೋಕನ್ ಮೂಲಕ ದಿನಸಿ ಕಿಟನ್ನು ಮನೆ ಮನೆಗೆ ತಲುಪಿಸುವಕೆಲಸ ಮಾಡಲಾಯಿತು.
ಈ ವೇಳೆ ಸಂಸದ ಪ್ರತಾಪ್ ಸಿಂಹ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದ ಕುಮಾರ್, ಹಿರಿಯ ವಕೀಲ ಎಂ.ಡಿ.ಹರೀಶ್ ಕುಮಾರ್ ಹೆಗಡೆ, ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಸಂಪಾದಕರು, ವಕೀಲರು ಎಚ್.ಎನ್.ವೆಂಕಟೇಶ್ ಮತ್ತಿತರರು ಹಾಜರಿದ್ದರು.