Advertisement
ಸರಕಾರ ಒದಗಿಸುವ ಪಡಿತರವನ್ನು ವೃದ್ಧಾಪ್ಯದ ಕಾರಣಕ್ಕೆ ಸರಿಯಾಗಿ ಪಡೆಯಲಾಗದೆ ಸಂಕಷ್ಟದಲ್ಲಿರುವ ಹಿರಿಯ ಚೇತನಗಳಿಗೆ ನೆರವಾಗುವ ಉದ್ದೇಶ ಈ ಯೋಜನೆಯಿದು.ರಾಜ್ಯದಲ್ಲಿ ಒಟ್ಟು 7 ಸಾವಿರ ಮಂದಿ ಇಂತಹ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. ಸದ್ಯ ಪ್ರಾಯೋಗಿಕವಾಗಿ 800 ಮಂದಿಗೆ ಪಡಿತರ ವಿತರಿಸಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ಪಡಿತರ ಅಂಗಡಿಯವರೇ ತಮ್ಮ ವ್ಯಾಪ್ತಿಯಲ್ಲಿರುವ ಹಿರಿಯ ನಾಗರಿಕರ ಮನೆಗೆ ಹೋಗಿ ನೀಡಿ ಬರುತ್ತಿದ್ದಾರೆ.
ಯೋಜನೆ ಕಾರ್ಯಗತ ಮಾಡುವುದಕ್ಕಾಗಿ ಅನ್ನ ಸುವಿಧ ಆ್ಯಪ್ ಸಿದ್ಧಪಡಿಸಿ ಆಹಾರ ನಿರೀಕ್ಷಕರು, ಪಡಿತರ ಅಂಗಡಿಯವರಿಗೆ ಲಾಗಿನ್ ಕೊಡಲಾಗಿದೆ. ಅಂಗಡಿಯವರು ತಮ್ಮ ಮೊಬೈಲ್ ನಂಬರ್ ಮೂಲಕ ಒಟಿಪಿಯೊಂದಿಗೆ ಲಾಗಿನ್ ಆಗುತ್ತಾರೆ.
Related Articles
Advertisement
ಶೀಘ್ರ ಯೋಜನೆ ಜಾರಿ?ಅನ್ನ ಸುವಿಧ ಸದ್ಯ ಪೈಲಟ್ ಯೋಜನೆಯಾಗಿದ್ದು, ಮನೆಗೆ ನ್ಯಾಯಬೆಲೆ ಅಂಗಡಿಯವರು ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಆದರೆ ಮುಂದೆ ಈ ಯೋಜನೆ ಖಾಯಂ ಆಗಿ ಜಾರಿಯಾಗುವಾಗ ಒಂದು ಬಟವಾಡೆಗೆ ಶುಲ್ಕವಾಗಿ 50 ರೂ. ನೀಡುವ ಪ್ರಸ್ತಾವನೆಯನ್ನು ಆಹಾರ ಇಲಾಖೆ ಸಿದ್ಧಪಡಿಸಿದೆ. ಇದನ್ನು ಹಣಕಾಸು ಇಲಾಖೆ ಅನುಮೋದನೆ ನೀಡಿದ ಬಳಿಕ ಯೋಜನೆ ಅಧಿಕೃತವಾಗಿ ಜಾರಿಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ~ ವೇಣುವಿನೋದ್ ಕೆ.ಎಸ್.