ಹೊಸಪೇಟೆ: ಐತಿಹಾಸಿಕ ಹಂಪಿ ಶ್ರೀವಿರೂಪಾಕ್ಷೇಶರಸ್ವಾಮಿ ಹಾಗೂ ಚಂದ್ರಮೌಳೀಶ್ವರ ಸ್ವಾಮಿ ಜೋಡಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾಂಬಿಕೆ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ವಿಜಯ ನಗರ ಅರಸರ ಕಾಲದ ರತ್ನಖಚಿತ ಸ್ವರ್ಣ ಕಿರೀಟ ಹಾಗೂ ಧಿರಿಸು ಧರಿಸಿ ಶ್ರೀ ವಿದ್ಯಾರಣ್ಯ ಭಾರತೀ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ವಿರೂಪಾಕ್ಷ ದೇವಸ್ಥಾನದಿಂದ ಎದುರು ಬಸವಣ್ಣ ಮಂಟ ಪದವರೆಗೆ ಭಕ್ತರು ರಥ ಎಳೆದರು. ಬ್ರಹ್ಮರಥೋತ್ಸವದ ಅಂಗವಾಗಿ ರಥ ಬೀದಿಯ ಎದುರು ಬಸ ವ ಣ್ಣನ ಬೃಹತ್ ಪ್ರತಿ
ಮೆಗೆ ಬೆಳಗ್ಗೆ ಎಣ್ಣೆ ಮಜ್ಜನ, ಕ್ಷೀರಾಭಿಷೇಕ ನೆರವೇರಿಸಿದರು.
1509ರಲ್ಲಿ ಶ್ರೀಕೃಷ್ಣದೇವರಾಯ ಕೊಡ ಮಾಡಿದ ಶ್ರೀವಿರೂಪಾಕ್ಷಸ್ವಾಮಿ ನವರತ್ನ ಖಚಿತ ಸ್ವರ್ಣಮುಖ ಕಿರೀಟವನ್ನು ಪ್ರತಿಮೆಗೆ ತೊಡಿಸಿ ಅಲಂಕರಿಸಲಾಗಿತ್ತು. ರಾಜ್ಯ,ಆಂಧ್ರ, ತೆಲಂಗಾಣ
ಸೇರಿ ದಂತೆ ವಿವಿಧೆಡೆಗಳಿಂದ ಭಕ್ತರು ಭಾಗವಹಿಸಿದ್ದರು.