Advertisement

ಬಾಳೆಹಣ್ಣು ಎಸೆದು ಹರಕೆ ಸಲ್ಲಿಸಿದ ಭಕ್ತರು

05:08 PM Mar 10, 2020 | Suhan S |

ನೆಲಮಂಗಲ : ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಡಶೀಘಟ್ಟ ಗ್ರಾಮದ ಚೋಳರ ಕಾಲದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

Advertisement

ಶ್ರೀವಿಕಾರಿ ನಾಮ ಸಂವತ್ಸರದ ಪಾಲ್ಗುಣ ಶುದ್ಧ ಪೂರ್ಣಮಿ ಪುಬ್ಬ ನಕ್ಷತ ಸೋಮವಾರ ಮಧ್ಯಾಹ್ನ 2:05ಕ್ಕೆ ಅಭಿಜಿನ್‌ ಮೂಹೂರ್ತದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ತಹಶೀಲ್ದಾರ್‌ ಶ್ರೀನಿವಾಸಯ್ಯ ಮತ್ತು ಮುಜುರಾಯಿ ಇಲಾಖೆಯ ಅಧಿಕಾರಿಗಳು ಪೂಜೆಸಲ್ಲಿಸಿ ಚಾಲನೆ ನೀಡಿದರು. ನಂತರ ನೆರೆದಿದ್ದ ಸಾವಿರಾರು ಭಕ್ತಾದಿಗಳು ರಥವನ್ನು ಎಳೆದು ಬಾಳೆಹಣ್ಣು ಮತ್ತು ದವನವನ್ನು ಎಸೆಯುವ ಮೂಲಕ ತಮ್ಮ ಹರಕೆಗಳನ್ನು ಸಲ್ಲಿಸಿದರು.

ದೊಡ್ಡಬೆಲೆ ಗ್ರಾಪಂ ಅಯಕ್ಷೆ ನಂಜಮಣಿ ಚಂದ್ರಪ್ಪ ಮಾತನಾಡಿ, ನಮ್ಮ ನಾಡಿನ ಅಸ್ಮಿತೆಯ ಸಂಕೇತವಾಗಿ ರಥೋತ್ಸವಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಈ ಆಚರಣೆಯನ್ನು ಭಾವನಾತ್ಮಕವಾಗಿ ಎಲ್ಲಾರು ಒಂದು ಕಡೆ ಸೇರಿ ಯಾವುದೇ ತಾರತಮ್ಯವಿಲ್ಲದೇ ಸಮಾನತೆಯ ಸಂಕೇತವಾಗಿ ಆಚರಿಸಬೇಕು ಎಂದರು, ಮನಸ್ಸಿಗೆ ನೆಮ್ಮದಿ ಪಡೆಯಲು ಮತ್ತು ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ದೇವಾಲಯದ ಮೋರೆ ಹೋಗುತ್ತಾರೆ ಎಂದರು.

ರಥೋತ್ಸವದಲ್ಲಿ ಕಲ್ಯಾಣೋತ್ಸವ, ಅಂಕುರಾರ್ಪಣ, ಮಂಗಳವಾದ್ಯ ದೀಪಾಲಂಕಾರ, ಗರುಡೋತ್ಸವ, ಗಜೇಂದ್ರ ಮೋಕ್ಷಾ, ಕಾಶಿಯಾತ್ರೋತ್ಸವ, ಸೇರಿದಂತೆ ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ರಥೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತ್ಯಾಮಗೊಂಡ್ಲು ಪೊಲೀಸ್‌ ಠಾಣೆಯ ಪಿಎಸ್‌ಐ ಕೃಷ್ಣಕುಮಾರ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ನಟರಾಜು, ಪುರುಷೋತ್ತಮ್‌, ಚಂದ್ರಪ್ಪ, ನಂಜೇಗೌಡ, ನಟರಾಜು, ಗುರು ಪ್ರಕಾಶ್‌, ನಾರಾಯಣಸ್ವಾಮಿ, ಹನುಮಂತರಾಜು, ಪುಟ್ಟಸ್ವಾಮಿ,ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next