Advertisement

ಕಾಶ್ಮೀರದಲ್ಲಿ ರತ್ನನ್‌ ಪ್ರಪಂಚ

12:37 PM Jan 04, 2021 | Team Udayavani |

ಕೋವಿಡ್ ಬಳಿಕ ಅನೇಕ ಸಿನಿಮಾ ತಂಡಗಳು ಹಾಡಿನ ಚಿತ್ರೀಕರಣಕ್ಕೆ ಕಾಶ್ಮೀರದತ್ತ ಪ್ರಯಾಣ ಬೆಳೆಸುತ್ತಿವೆ. ಈಗಾಗಲೇ ರಕ್ಷಿತ್‌ ಶಟ್ಟಿ ನಾಯಕರಾಗಿರುವ “777 ಚಾರ್ಲಿ’ ಹಾಗೂ ಪ್ರೇಮ್‌ ನಿರ್ದೇಶನದ “ಏಕ್‌ಲವ್ಯ’ ಚಿತ್ರಗಳು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದಿವೆ. ಈಗ “ರತ್ನನ್‌ ಪ್ರಪಂಚ’ ಸರದಿ.

Advertisement

ಇದನ್ನೂ ಓದಿ : ನೀರ್‌ದೋಸೆ ಇಷ್ಟಪಟ್ಟವರಿಗೆ ಪೆಟ್ರೋಮ್ಯಾಕ್ಸ್‌ ಇಷ್ಟವಾಗುತ್ತೆ

ಧನಂಜಯ್‌ ನಾಯಕರಾಗಿರುವ “ರತ್ನನ್‌ ಪ್ರಪಂಚ’ ಚಿತ್ರದ ಹಾಡಿನ ಚಿತ್ರೀಕರಣ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿದೆ. ಧನಂಜಯ್‌ ಹಾಗೂ ನಾಯಕಿ ರೆಬಾ ಚುಮು ಚುಮು ಚಳಿಯಲ್ಲಿ ಕ್ಯಾಮರಾಗೆ ಫೋಸ್‌ ನೀಡುತ್ತಿದ್ದಾರೆ. ಈ ಚಿತ್ರವನ್ನು ಕೆ.ಆರ್‌.ಜಿ. ಸ್ಟುಡಿಯೋ ಹಾಗೂ ಯೋಗಿ ಜಿ ರಾಜ್‌ ಸೇರಿ ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next