ಕನ್ನಡ ಪದ್ಯಕ್ಕೆ ಕೃಷ್ಣ ರವಿ ಅಲೆವೂರಾಯರು ಇಂಗ್ಲಿಷ್‌ನಲ್ಲಿ ಮಾತನಾಡಲು ಆರಂಭಿಸಿದಾಗಲೇ ಇಂಗ್ಲಿಷ್ ಆಟಕ್ಕೆ ಬಂದೆನೆಂಬುದು ಧೃಢವಾಯಿತು. ಕನ್ನಡ ಯಕ್ಷಗಾನದಲ್ಲಿ ಇಂಗ್ಲಿಷ್ ಬಳಕೆಯಾದರೆ ಕ್ಷಮ್ಯವಲ್ಲ. ಹಾಗೆಯೇ ಇಂಗ್ಲಿಷ್ ಆಟದಲ್ಲೂ ಕನ್ನಡ ಬರಬಾರದು.
ಹರಿಪ್ರಸಾದ ಕಾರಂತರ ಪೀಠಿಕೆ ಕನ್ನಡ ಪದ್ಯಕ್ಕೆ ಕೃಷ್ಣ ರವಿ ಅಲೆವೂರಾಯರು ಇಂಗ್ಲಿಷ್‌ನಲ್ಲಿ ಮಾತನಾಡಲು ಆರಂಭಿಸಿದಾಗಲೇ ಇಂಗ್ಲಿಷ್ ಆಟಕ್ಕೆ ಬಂದೆನೆಂಬುದು ಧೃಢವಾಯಿತು. ಕನ್ನಡ ಯಕ್ಷಗಾನದಲ್ಲಿ ಇಂಗ್ಲಿಷ್ ಬಳಕೆಯಾದರೆ ಕ್ಷಮ್ಯವಲ್ಲ. ಹಾಗೆಯೇ ಇಂಗ್ಲಿಷ್ ಆಟದಲ್ಲೂ ಕನ್ನಡ ಬರಬಾರದು. ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡು, ಭಾಷಾ ಸೌಂದರ್ಯದಿಂದ ಎಲ್ಲಾ ರಸಗಳನ್ನು ಸರಿದೂಗಿಸಿಕೊಂಡು ಸಂಭಾಷಣೆಯನ್ನು
ಡಾ| ಸತ್ಯಮೂರ್ತಿಯವರು ಬರೆದು ತಾವು ಸ್ವತಃ ಕಮಲ ಭೂಪನ ಪಾತ್ರ ನಿರ್ವಹಿಸಿ, ಕಥೆಯ ಓಘಕ್ಕೆ ತಮ್ಮ ಕೊಡುಗೆಯನ್ನು ನೀಡಿದರು. ಸಂಚಾಲಕ ಸಂತೋಷ ಐತಾಳರು ಯಕ್ಷ ನಂದನ ಆಂಗ್ಲ ಭಾಷಾ ಬಳಗವನ್ನು ಮುನ್ನಡೆಸುತ್ತಾ ಬರುತ್ತಿದ್ದಾರೆ. ಸಹೋದರ ಸುರೇಶ ಐತಾಳರೂ ಇದರ ಬೆಳವಣಿಗೆಗಾಗಿ ಸಹಕರಿಸುತ್ತಿದ್ದಾರೆ.
ಶ್ರೀಕೃಷ್ಣ ,ರುಕ್ಮಿಣಿಯೊಂದಿಗೆ ಮಾತಿಗಿಳಿದು ಮನ್ಮಥನ ವಿವಾಹಕ್ಕೆ ಎಂಟು ದಿನಗಳ ಗಡುವು ನೀಡುತ್ತಾನೆ. ಆದರೆ ಒಲ್ಲದ ರುಕ್ಮಿಣಿ ಇದು ಕೈಗೂಡದಿದ್ದರೆ ಹದಿನಾರು ಸಾವಿರದ ಎಂಟು ಸ್ತ್ರೀಯರೂ ದ್ವಾರಕೆಯನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕುತ್ತಾರೆ. ಆಗ ಕೃಷ್ಣನೇ ಎಂಟು ದಿನಗಳೊಳಗಾಗಿ ಮಾರನಿಗೆ ಕನ್ಯೆಯನ್ನು ತಂದು ವಿವಾಹ ಮಾಡದಿದ್ದರೆ ತಾನೇ ದ್ವಾರಕೆಯನ್ನು ಬಿಟ್ಟು ಹೋಗುವುದಾಗಿ ಹೇಳಿ ನಾಡು ನಾಡುಗಳಲ್ಲಿ ಸಂಚರಿಸಿ, ಕನ್ಯಾಮಣಿಯೋರ್ವಳು ದೊರಕದಿದ್ದಾಗ ತಂಗಿ ದ್ರೌಪದಿಯನ್ನು ಸಹಾಯಕ್ಕಾಗಿ ನೆನಪಿಸಿಕೊಳ್ಳುತ್ತಾನೆ. ಅಪರ ರಾತ್ರಿಯಾದರೂ ಆಕೆ ಅಣ್ಣನ ಕರೆಗೆ ಓಡೋಡಿ ಬರುತ್ತಾಳೆ. ಮೊದಲಾಕೆ ಒಪ್ಪದಿದ್ದರೂ ಅಣ್ಣನಿಗಾಗಿ ಒಪ್ಪಿ ಕನ್ಯೆಯನ್ನು ಅರಸುತ್ತಾ ಕಮಲಾವತಿಗೆ ಬಂದು ಕಮಲ ಭೂಪನನ್ನು ಒಡಂಬಡಿಸಲು ಪ್ರಯತ್ನಿಸುತ್ತಾಳೆ. ಆದರೆ ಆತ ಒಪ್ಪದಿದ್ದಾಗ ಆಸ್ಥಾನ ತೊರೆದು ಬರುತ್ತಾಳೆ. ಆಗ ಅಲ್ಲಿಗೆ ಬಂದ ರತಿ ಕಮಲ ಭೂಪನಿಗೆ ತನ್ನ ಪೂರ್ವ ವೃತ್ತಾಂತವನ್ನು ತಿಳಿಸಿದಾಗ ಆತ ಒಪ್ಪಿ ದ್ರೌಪದಿಯನ್ನು ಪುನಃ ಕರೆಸಿ ದಿಬ್ಬಣಿಗರಾಗಿ ಬರಲು ಹೇಳುತ್ತಾನೆ. ದ್ರೌಪದಿ ಅಣ್ಣನಿಗೆ ಶುಭ ಸಂದೇಶವನ್ನು ತರುತ್ತಾಳೆ. ಬಲರಾಮನ ನೇತೃತ್ವದಲ್ಲಿ ದಿಬ್ಬಣ ಪಾಂಡವರ ಸಹಿತ ಕಮಲಾವತಿಗೆ ಬರುತ್ತದೆ.ಇತ್ತ ಮಾದ್ರಾಧೀಶನಾದ ಕೌಂಡ್ಲಿಕ ತಾನೂ ರತಿಯನ್ನು ಮದುವೆಯಾಗಲು ಬಯಸಿ ಬರುತ್ತಾನೆ. ಕಮಲಭೂಪ ಒಪ್ಪದಿದ್ದಾಗ ಮದುವೆ ಮನೆ ರಣಾಂಗಣವಾಗುತ್ತದೆ. ಆಗ ದ್ರೌಪದಿ ಚಂಡಿಕೆಯಾಗಿ ಕಾಣಿಸಿಕೊಂಡು ಕೌಂಡ್ಲಿಕನನ್ನು ವಧಿಸಿ, ಅಳಿಯನಿಗೆ ರತಿಯೊಂದಿಗೆ ವಿವಾಹ ನಡೆಸಿ “ರತಿ ಕಲ್ಯಾಣ’ ನೆರವೇರುವಂತೆ ಮಾಡುತ್ತಾಳೆ. ಕಥೆಯ ಪ್ರಮುಖ ಪಾತ್ರಗಳಾದ ಕೃಷ್ಣ, ದ್ರೌಪದಿ, ಕಮಲಭೂಪ, ಹಾಸ್ಯ, ರತಿ, ಕೌಂಡ್ಲಿಕ ಚೆನ್ನಾಗಿ ಮೂಡಿಬಂದವು. ಯಕ್ಷಗಾನಕ್ಕೆ ಇಂಗ್ಲಿಷೂ ಆದೀತು ಎಂಬ ಭಾವನೆ ಮೂಡಿಬಂತು.
ಹಿಮ್ಮೇಳ ಕಲಾವಿದರಾಗಿ ಹರಿಪ್ರಸಾದ್ ಕಾರಂತ, ಸುಬ್ರಹ್ಮಣ್ಯ ಚಿತ್ರಾಪುರ, ಪದ್ಯಾಣ ಶಂಕರನಾರಾಯಣ ಭಟ…, ದಿವಾಣ ಶಂಕರ ಭಟ್, ಕೃಷ್ಣಯ್ಯ ಆಚಾರ್ಯ, ಸಿ. ಸೂರ್ಯನಾರಾಯಣ ಸಹಕರಿಸಿದರೆ, ಮುಮ್ಮೇಳದಲ್ಲಿ ವೃಂದಾ ಕೊನ್ನಾರ್, ಡಾ. ಜೆ. ಎನ್. ಭಟ್, ಸರ್ಪಂಗಳ ಈಶ್ವರ ಭಟ್, ಶಿವತೇಜ ಐತಾಳ್, ನಾಗೇಶ್ ಕಾರಂತ, ಶಂಕರ ಆರಿಗ, ಶಂಕರನಾರಾಯಣ ಮೈರ್ಪಾಡಿ, ಸ್ಕಂದ ಕೊನ್ನಾರ್, ನಂದನೇಶ ಹೆಬ್ಟಾರ್, ಶರತ್‌ಶ್ಚಂದ್ರ , ಸಂತೋಷ ಐತಾಳ, ಪ್ರಶಾಂತ್ ಐತಾಳ ಮತ್ತು ಮಯೂ ಪಣಂಬೂರು ಇದ್ದರು.
ರಮ್ಯಾ ರಾಘವೇಂದ್ರ