Advertisement
ಚಂದನವನದಲ್ಲಿ ಖಳನಟನ ಪಾತ್ರದಲ್ಲೇ ಹೆಚ್ಚು ಕಾಣಿಸಿಕೊಂಡು, ಬೇಡಿಕೆಯ ನಟನಾಗಿ ಬೆಳದವರು ʼರಥಸಪ್ತಮಿʼ ಖ್ಯಾತಿಯ ಅರವಿಂದ್. 90 ಹಾಗೂ 2000 ಇಸವಿಯ ಸಿನಿ ಮಂದಿಗೆ ಅರವಿಂದ್ ಅವರ ಪರಿಚಯ ಇರುತ್ತದೆ. ಬಣ್ಣದ ಲೋಕದಲ್ಲಿ ಅರವಿಂದ್ ನಾನಾ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಖಳನಟನ ಪಾತ್ರ ಅವರ ವೃತ್ತಿ ಬದುಕಿನ ಯಶಸ್ಸಿನ ಮೆಟ್ಟಲಾಯಿತು ಎಂದರೆ ತಪ್ಪಾಗದು.
Related Articles
Advertisement
ಈ ಸಿನಿಮಾದ ಬಳಿಕ ಅರವಿಂದ್ ಅವರಿಗೆ ಅದೃಷ್ಟ ಹುಡುಕಿಕೊಂಡು ಬಂತು. ಸಾಲು ಸಾಲು ಸಿನಿಮಾದಲ್ಲಿ ಅವರು ಕಾಣಿಸಿಕೊಂಡರು. ಇದರಲ್ಲಿ ಬಹುತೇಕ ಖಳನಟನ ಪಾತ್ರವಾಗಿತ್ತು. ಅವರು ಖಳನಟನಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದರು.
ಸುಮಾರು 250ಕ್ಕೂ ಚಿತ್ರಗಳಲ್ಲಿ ಅಭಿನಯಿಸಿ, 4 ದಶಕಕ್ಕೂ ಹೆಚ್ಚಿನ ಕಾಲ ಚಂದನವನದಲ್ಲಿ ಬಹುತೇಕ ಸ್ಟಾರ್ ನಟರ ಸಿನಿಮಾದಲ್ಲಿ ಕಾಣಿಸಿಕೊಂಡು ಅರವಿಂದ್, ಇದ್ದಕ್ಕಿದ್ದಂತೆ ಸಿನಿಮಾರಂಗದಂತೆ ಮಾಯಾವಾದರು. ಹೊಸ ಕಾಲದ ಸಿನಿಮಾದಲ್ಲಿ ಅವರು ಕಾಣಿಸಿಕೊಂಡದ್ದು ತೀರಾ ಕಡಿಮೆ.
ಅರವಿಂದ್ ಎನ್ನುವ ಖಳನಾಯಕ ಜನಪ್ರಿಯತೆ ಇಂದಿನ ಕಾಲ ಮರೆತೇ ಹೋಗಿರಬಹುದು ಎನ್ನುವಷ್ಟರ ಮಟ್ಟಿಗೆ ಚಿತ್ರರಂಗದಿಂದ ಅರವಿಂದ್ ದೂರವಾದರು.
ಇದೀಗ ಬಹು ಸಮಯದ ಬಳಿಕ ಅರವಿಂದ್ ಪ್ರತ್ಯಕ್ಷರಾಗಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅರವಿಂದ್, ನಟನೆಯಲ್ಲಿ ಅವಕಾಶಗಳೇ ಇಲ್ಲ ಎನ್ನುವುದರ ಬಗ್ಗೆ ನೋವನ್ನು ಹಂಚಿಕೊಂಡಿದ್ದಾರೆ.
ಅರವಿಂದ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಯಾಕೆ ಎಂದು ಮಹಿಳೆಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಅರವಿಂದ್ ನಗುಮುಖದಿಂದಲೇ ಉತ್ತರಿಸಿದ್ದಾರೆ. “ಎಲ್ಲಾ ಹೊಸಬರ ಹಾವಳಿ, ಅದರಿಂದ ನಮ್ಗೆ ಸ್ವಲ್ಪ ರೆಸ್ಟ್. ಮತ್ತೆ ತಿರುಗಿ ಶುರು ಆಗುತ್ತೆ. ಇಷ್ಟು ದಿನ ಆಜ್ಞಾತವಾಸ, ಮತ್ತೆ ತಿರುಗಿ ಶುರು” ಎಂದಿದ್ದಾರೆ.
ಏನು ಕ್ಯಾರೆಕ್ಟರ್ ಮಾಡೋಕೆ ಇಷ್ಟಪಡ್ತೀರಾ ಎಂದು ಕೇಳಿದಾಗ “ಇಂಥ ಕ್ಯಾರೆಕ್ಟರ್ ಅಂಥೇನಿಲ್ಲ. ನಾನೊಬ್ಬ ಆರ್ಟಿಸ್ಟ್, ಎನಿ ಕ್ಯಾರೆಕ್ಟರ್, ಯಾವ್ ಕ್ಯಾರೆಕ್ಟರ್ ಇದ್ರು ಮಾಡುತ್ತೇನೆ” ಎಂದಿದ್ದಾರೆ.
2022 ರಲ್ಲಿ ಅರವಿಂದ್ ಅವರು, ʼʼನೆನಪಾಗುತ್ತಿಲ್ಲ” ಕಾಣಿಸಿಕೊಂಡಿದ್ದರು. ಆದಾದ ಬಳಿಕ ಅವರು, ಹೊಸಬರ ʼಅನಾವರಣʼ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದಾದ ನಂತರ ಅವರು ಸಿನಿಮಾರಂಗದಿಂದ ಮಾಯಾವಾಗಿದ್ದರು.