ದುಬಾರಿಯಾಗಲಿದೆಯೇ ಅಥವಾ ಈಗಿನ ದರಕ್ಕಿಂತ ಅಗ್ಗವಾಗುತ್ತದೆಯೇ ಎಂಬ ಜಿಜ್ಞಾಸೆ ಪ್ರಾರಂಭವಾಗಿದೆ. ಏಕೆಂದರೆ, ಪ್ರಸ್ತುತ ಹೋಟೆಲ್‌ಗಳಲ್ಲಿ ಶೇ.14.5 ವ್ಯಾಟ್, ಶೇ.5.6 ಸೇವಾ ತೆರಿಗೆ, ಶೇ.0.2 ರಷ್ಟು ಕೃಷಿ ಹಾಗೂ ಸ್ವತ್ಛ ಭಾರತ್ ಶುಲ್ಕ, ಶೇ.10ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಜಿಎಸ್‌ಟಿ ಜಾರಿಗೆ ಬಂದ ನಂತರ ವ್ಯಾಟ್, ಸೇವಾ ತೆರಿಗೆ, ಕೃಷಿ ಮತ್ತು ಸ್ವತ್ಛಭಾರತ್ ಸೆಸ್ ಇರುವುದಿಲ್ಲ. ಬದಲಿಗೆ ಜಿಎಸ್‌ಟಿ ಶೇ.12 (ಹವಾ ನಿಯಂತ್ರಿತ ಇದ್ದರೆ ಶೇ.18) ಹಾಗೂ ಶೇ.10 ರಷ್ಟು ಸೇವಾ ಶುಲ್ಕವಷ್ಟೇ ಪಡೆಯಬಹುದು ಎಂತಿದೆ. ಈ ಲೆಕ್ಕಾಚಾರ ಹಾಕಿದರೆ ಪ್ರಸ್ತುತ ಎಲ್ಲ ತೆರಿಗೆ ಸೇರಿ ಶೇ.30.5 ಆಗಲಿದೆ.
Advertisement
ಜಿಎಸ್‌ಟಿ ಜಾರಿ ನಂತರ ತೆರಿಗೆ ಪ್ರಮಾಣ ಸೇವಾ ಶುಲ್ಕ ಸೇರಿ ಶೇ.22 ರಿಂದ 28ಗೆ ಏರಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಈ ಪ್ರಕಾರ ಹೋಟೆಲ್-ರೆಸ್ಟೋರೆಂಟ್‌ಗಳಲ್ಲಿ ತಿಂಡಿ-ತಿನಿಸು ದರ ಕಡಿಮೆಯಾಗಬೇಕು. ಆದರೆ, ಹೋಟೆಲ್ ಮಾಲೀಕರ ವಾದವೇ ಬೇರೆ ಆಗಿದ್ದು, ಜಿಎಸ್‌ಟಿ ಜಾರಿ ನಂತರ ಸಹಜವಾಗಿ ಬೆಲೆ ಹೆಚ್ಚಾಗಲಿದೆ. ವಾರ್ಷಿಕ 75 ಲಕ್ಷ ರೂ. ಗಿಂತ ಅಧಿಕ ವಹಿವಾಟು ನಡೆಸುವ ಹೋಟೆಲ್‌ಗಳಿಗೆ ಹವಾನಿಯಂತ್ರಿವಾದರೆ ಶೇ.18, ಹವಾನಿಯಂತ್ರಿತ ಇಲ್ಲದಿದ್ದರೆ ಶೇ.12 ರಷ್ಟು ಜಿಎಸ್‌ಟಿ ಬೀಳಲಿದೆ. ಇದು ಹಾಲಿ ತೆರಿಗೆಗಿಂತ ಹೆಚ್ಚು. ಹೀಗಾಗಿ, ಜಿಎಸ್ಟಿಹೊರೆ ಗ್ರಾಹಕರಿಂದಲೇ ಭರಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ದಿನಕ್ಕೆ 22 ಸಾವಿರ ರೂ. ವ್ಯಾಪಾರ ಆದರೂ ವಾರ್ಷಿಕ ವಹಿವಾಟು ಪ್ರಮಾಣ 75 ಲಕ್ಷ ರೂ. ಮೀರುತ್ತದೆ. ಹೀಗಾಗಿ, ಬಹುತೇಕ ಹೋಟೆಲ್ -ರೆಸ್ಟೋರೆಂಟ್‌ಗಳು ಜೆಎಸ್‌ಟಿ ಶೇ.12ರ ತೆರಿಗೆ ವ್ಯಾಪ್ತಿಗೆ ಬರಲಿದೆ. ಇಂತಹ ಹೋಟೆಲ್-ರೆಸ್ಟೋರೆಂಟ್‌ಗಳಲ್ಲಿ ತಿಂಡಿ ಬೆಲೆ ದೊಡ್ಡ ಪ್ರಮಾಣದಲ್ಲೇ ಹೆಚ್ಚಾಗಲಿದೆ.
ಜಿಎಸ್‌ಟಿ ಪಾವತಿಸಬೇಕಾದ ಹೋಟೆಲ್‌ಗಳಿಗೆ ಹೆಚ್ಚಿನ ಹೊರೆಯಾಗುವುದು ಸತ್ಯ. ಹೀಗಾಗಿ, ಅಂತಹ ಹೋಟೆಲ್‌ಗಳು ಗ್ರಾಹಕರ ಮೂಲಕ ಜಿಎಸ್‌ಟಿ ಸಂಗ್ರಹಿಸಲು ನಿರ್ಧರಿಸಿವೆ.
ಚಂದ್ರಶೇಖರ್ ಹೆಬ್ಟಾರ್, ಅಧ್ಯಕ್ಷ ಹೋಟೆಲ್ ಮಾಲೀಕರ ಸಂಘ