ನವದೆಹಲಿ: 2018-19ರ ಸಾಲಿಗೆ ಅನ್ವಯವಾಗುವಂತೆ ಕಾರ್ಮಿಕ ಭವಿಷ್ಯ ನಿಧಿ(ಇಪಿಎಫ್)ಯ ಬಡ್ಡಿ ದರವನ್ನು ಶೇ.8.65ಕ್ಕೆ ಏರಿಕೆ ಮಾಡಲಾಗಿದೆ ಎಂದು ಇಪಿಎಫ್ಒ(ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಜೇಶನ್) ಬುಧವಾರ ಘೋಷಿಸಿದೆ.
ಇಪಿಎಫ್ ಖಾತೆ ಹೊಂದಿರುವ ಆರು ಕೋಟಿ ಮಂದಿ ಸದಸ್ಯರಿಗೆ 54,000 ಕೋಟಿ ಬಡ್ಡಿದರವನ್ನು ಕ್ರೆಡಿಟ್ ಮಾಡಲಾಗಿದೆ ಎಂದು ಇಪಿಎಫ್ ಒ ಟ್ವೀಟ್ ಮೂಲಕ ತಿಳಿಸಿದೆ.
2017-18ರ ಸಾಲಿನಲ್ಲಿ ಇಪಿಎಫ್ಒ ಕಾರ್ಮಿಕ ಭವಿಷ್ಯ ನಿಧಿಗೆ ಶೇ.8.55ರಷ್ಟು ಬಡ್ಡಿದರ ನೀಡಲು ಅನುಮತಿ ನೀಡಿತ್ತು. ಇದೀಗ 2019ರ ಫೆಬ್ರುವರಿ 22ರಂದು ಇಪಿಎಫ್ ಗೆ ಶೇ.8.65ರಷ್ಟು ಬಡ್ಡಿದರ ನೀಡಲು ಇಪಿಎಫ್ ಒ ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
Related Articles
ನಿಮ್ಮ ಪಿಎಫ್ ಬ್ಯಾಲೆನ್ಸ್ ಪರೀಕ್ಷಿಸಿ:
1)ಇಪಿಎಫ್ ಒ ವೆಬ್ ಸೈಟ್ (www.epfindia.gov.in) ಲಾಗಿನ್ ಮಾಡಿ
2)ವೆಬ್ ಸೈಟ್ ನ ಎಡಭಾಗದಲ್ಲಿ “Our service” ಟ್ಯಾಬ್ ಅನ್ನು ಕ್ಲಿಕ್ ಮಾಡಿದಾಗ “For Employees” ಆಯ್ಕೆ ಕ್ಲಿಕ್ ಮಾಡಬೇಕು.
3)ನಂತರ ಅದರಲ್ಲಿ ಮೆಂಬರ್ ಪಾಸ್ ಬುಕ್ ಕ್ಲಿಕ್ ಮಾಡಿ.
4)ನಿಮ್ಮ UAN (Universal Account Number)ಸಂಖ್ಯೆಯಲ್ಲಿ ಲಾಗಿನ್ ಆಗಿ, ಪಾಸ್ ವರ್ಡ್ ಹಾಕಬೇಕು.
5)ಲಾಗಿನ್ ಬಳಿಕ ನಿಮ್ಮ ಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.