Advertisement

ರತನ್‌ ಟಾಟಾ ಭೇಟಿ

06:22 AM Feb 22, 2019 | Team Udayavani |

ಬೆಂಗಳೂರು: “ಏರೋ ಇಂಡಿಯಾ-2019’ರ ಎರಡನೇ ದಿನವಾದ ಗುರುವಾರ ಪ್ರತಿಷ್ಠಿತ ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್‌ ಟಾಟಾ ಭೇಟಿ ನೀಡಿದ್ದರು. ಪ್ರದರ್ಶನದಲ್ಲಿ ಟಾಟಾ ಗ್ರೂಪ್‌ ಕೂಡ ಒಂದು ಮಳಿಗೆಯನ್ನು ಹಾಕಿದೆ. ಅಲ್ಲಿಗೆ ರತನ್‌ ಟಾಟಾ ಭೇಟಿ ನೀಡಿ, ಕಂಪನಿಯ ವೈಮಾನಿಕ ಮತ್ತು ರಕ್ಷಣಾ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿದರು.

Advertisement

ಅಷ್ಟಕ್ಕೂ ರತನ್‌ ಟಾಟಾ ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. 2007ರಲ್ಲಿ ಕೂಡ ಆಗಮಿಸಿದ್ದರು. ಆಗ ಬಹು ಉದ್ದೇಶಿತ ಯುದ್ಧವಿಮಾನ ಎಫ್-16ರಲ್ಲಿ ಪೈಲಟ್‌ ಪಾಲ್‌ ಹ್ಯಾಟನ್‌ಡಾಫ್ì ಅವರೊಂದಿಗೆ ಸಹ-ಪೈಲಟ್‌ ಆಗಿ ಸುಮಾರು 37 ನಿಮಿಷಗಳ ಕಾಲ ಹಾರಾಟ ನಡೆಸಿದ್ದರು. ಆಗ ಅವರಿಗೆ 69 ವರ್ಷ.

ಅಂದಹಾಗೆ, ರತನ್‌ ಟಾಟಾ ಪೈಲಟ್‌ ಲೈಸನ್ಸ್‌ ಕೂಡ ಹೊಂದಿದ್ದು, “ಎಫ್-16 (ಫೈಟಿಂಗ್‌ ಫಾಲ್ಕನ್‌) ತಮಗೆ ಅತಿ ಹೆಚ್ಚು “ಥ್ರಿಲ್‌’ ನೀಡಿದ ಯುದ್ಧ ವಿಮಾನ’ ಎಂದು ಹೇಳಿಕೊಂಡಿದ್ದರು. 2015ರ ಪ್ರದರ್ಶನಕ್ಕೂ ಅವರು ಭೇಟಿ ನೀಡಿದ್ದರು. ಆ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next