Advertisement

ಮದ್ರಸಾ ನೀರಿಗೆ ಪಾಷಾಣ ಬೆರಕೆ: ಅನ್ಸಾರಿ ಪತ್ನಿ ದೂರು

07:50 AM Sep 19, 2017 | Harsha Rao |

ನವದೆಹಲಿ: ತಾವು ನಡೆಸುತ್ತಿರುವ ಮದರಸಾದ ನೀರಿನ ಟ್ಯಾಂಕ್‌ಗೆ ಯಾರೋ ಅಪರಿಚಿತ ದುಷ್ಕರ್ಮಿಗಳು ಇಲಿ ಪಾಷಾಣ ಬೆರೆಸಿದ್ದಾರೆ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಪತ್ನಿ ಸಲ್ಮಾ ಅನ್ಸಾರಿ ಆರೋಪಿಸಿದ್ದಾರೆ. 

Advertisement

ಕಳೆದ ರಾತ್ರಿ ನಮ್ಮ ಮದರಸಾದ ಬಾಲಕ ನೀರು ತುಂಬಿಸಿ ಕೊಳ್ಳಲು ಟ್ಯಾಂಕ್‌ ಬಳಿ ಹೋದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಟ್ಯಾಂಕಿನೊಳಗೆ ಏನನ್ನೋ ಬೆರೆಸುತ್ತಿರುವುದನ್ನು ನೋಡಿದ್ದಾನೆ. ಅಲ್ಲದೇ ಅವರು ಈ ವಿಷಯವನ್ನು ಯಾರಿಗೂ ಹೇಳಬೇಡ ಎಂದು ಆ ಹುಡುಗನಿಗೆ ಬೆದರಿಕೆ ಹಾಕಿದ್ದರು. ಆದರೂ ಬಾಲಕ ತಾನು ಕಂಡದ್ದನ್ನು ಮದರಸಾದ ವಿದ್ಯಾರ್ಥಿ ನಿಲಯದ ವಾರ್ಡನ್‌ಗೆ ಹೇಳಿದ್ದಾನೆ. ವಾರ್ಡನ್‌ ಮತ್ತಿತರರು ಟ್ಯಾಂಕ್‌ ಬಳಿ ಹೋದಾಗ ಅವರಿಗೆ ಹಲವಾರು ಇಲಿ ಪಾಷಾಣ ಮಾತ್ರೆಗಳು ಕಂಡುಬಂದಿವೆ ಎಂದಿದ್ದಾರೆ.

ಈ ಕುರಿತು ದೂರು ದಾಖಲಿಸಿರುವ ಪೊಲೀಸರು, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಅಲ್‌-ನೂರ್‌ ದತ್ತಿ ಸಂಸ್ಥೆ ನಡೆಸುವ ಈ ಮದರಸಾ ಅಲಿಗಢ ದಲ್ಲಿದೆ. ಇಲ್ಲಿ 4,000 ಮಕ್ಕಳು ಕಲಿಯುತ್ತಿದ್ದಾರೆ.  “ಅಮಾಯಕ ಮಕ್ಕಳ ಜೀವಕ್ಕೆ ಅಪಾಯ ಉಂಟುಮಾಡುವ ಹೇಡಿತನದ ಕೃತ್ಯ ಬಗ್ಗೆ ಕೇಳಿ ಆಘಾತ ಉಂಟಾಯಿತು’ ಎಂದಿದ್ದಾರೆ ಸಲ್ಮಾ.

Advertisement

Udayavani is now on Telegram. Click here to join our channel and stay updated with the latest news.

Next