ದೊಡ್ಡಬಳ್ಳಾಪುರ: ನ.12ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಎಲ್ಲಾ ವಕೀಲರು, ಬ್ಯಾಂಕ್ ವ್ಯವಸ್ಥಾಪಕರು, ವಿವಿಧ ಇಲಾಖೆಗಳ ಸಹಕಾರ ಅಗತ್ಯ ಎಂದು 4ನೇ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಧೀಶ ರಮೇಶ್ ದುರ್ಗಪ್ಪ ಎಕಬೋಟೆ ಹೇಳಿದರು.
ನಗರದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕುರಿತು ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜಿಯಾಗುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಸಲುವಾಗಿ ಅದಾಲತ್ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸದ್ಯದಲ್ಲೇ ಸರ್ಕಾರ ಪರಿಹರಿಸಲಿದೆ: ಬ್ಯಾಂಕ್, ಅಪಘಾತ, ಸಣ್ಣ ಪುಟ್ಟ ಜಗಳದಂತಹ ಪ್ರಕರಣ ಸೇರಿ ಕಕ್ಷಿದಾರರು ಇಚ್ಛಿಸಿದಲ್ಲಿ ಕಾನೂನಿನ ವ್ಯಾಪ್ತಿಯಲ್ಲಿ ಅವಕಾಶ ಇರುವ ಎಲ್ಲಾ ರೀತಿಯ ಪ್ರಕರಣ ಅದಾಲತ್‌ನಲ್ಲಿ ವಿಲೇವಾರಿ ಮಾಡಲಾಗುವುದು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕರಣಗಳು ಹೆಚ್ಚಾಗಿವೆ. ಆದರೆ, ಕೆಲವೊಂದು ಕಾನೂನು ತೊಡಕುಗಳಿಂದ ಅದಾಲತ್ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ. ಸದ್ಯದಲ್ಲೇ ಸರ್ಕಾರ ಪರಿಹರಿಸಲಿದೆ ಎಂದು ಹೇಳಿದರು.
ಕರ್ಕಶ ಶಬ್ಧ ಮಾಡಿದ್ರೆ ಕ್ರಮ: ಪೊಲೀಸರು ವಾಹನ, ಬೈಕ್ ಸವಾರರಿಗೆ ದಂಡ ವಿಧಿಸುವ ಸಂದರ್ಭದಲ್ಲಿ ವಾಹನ ವಿಮೆ ಮಾಡಿಸಿ ಕೊಂಡು ಬರುವಂತೆ ಮಾಲಿಕರಿಗೆ ತಿಳಿಸಬೇಕು. ದಂಡ ವಿಧಿ ಸಿದರೆ ವಾಹನ ಮಾಲಿಕರು ಪಾವತಿ ಸಬಹುದು. ಆದರೆ, ಅಪಘಾತಗಳು ನಡೆದಾಗ ವಿನಾಕಾರಣ ಕಾನೂನಿನ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕರ್ಕಶವಾದ ಶಬ್ದ ಮಾಡುತ್ತ ಬೈಕ್ ಚಲಾಯಿಸುವವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ತಿಳಿವಳಿಕೆ: ನಗರಸಭೆ ವ್ಯಾಪ್ತಿ ಯಲ್ಲಿ ವಿವಿಧ ರೀತಿಯ ತೇರಿಗೆ, ಸ್ವಚ್ಛತೆ, ಜನನ, ಮರಣ ಸೇರಿದಂತೆ ವಿವಿಧ ಪ್ರಕರಣಗಳ ಕುರಿತಂತೆ ವಾರ್ಡ್‌ವಾರು ಅದಾಲತ್‌ಗಳನ್ನು ನಡೆಸಿದರೆ ನ್ಯಾಯಾಲಯದ ವತಿಯಿಂದ ವಕೀಲರು ಹಾಗೂ ನ್ಯಾಯಾಧೀಶರು ಭಾಗವಹಿಸಿ ಜನರಿಗೆ ತಿಳಿವಳಿಕೆ ನೀಡಲಾಗುವುದು ಎಂದು ವಿವರಿಸಿದರು.
ಸಂಚಾರ ಠಾಣೆ ಆರಂಭ: ಡಿವೈಎಸ್ಪಿ ನಾಗರಾಜ್ ಮಾತನಾಡಿ, ನಗರದಲ್ಲಿನ ಸಂಚಾರ ವ್ಯವಸ್ಥೆ ಹಾಗೂ ಅಪಘಾತಗಳ ನಿಯಂತ್ರಣಕ್ಕಾಗಿಯೇ ಜನವರಿ ಯಿಂದ ಟ್ರಾಫಿಕ್ ಪೊಲೀಸ್ ಠಾಣೆ ಪ್ರಾರಂಭವಾ ಗಲಿದೆ. ವಾಹನಗಳ ಅಪಘಾತಗಳಿಂದ ಆಗುತ್ತಿ ರುವ ಜೀವಹಾನಿ ಕಡಿಮೆಗೊಳಿಸಲು ಸಹಕಾರಿ ಯಾಗಲಿದೆ ಎಂದು ತಿಳಿಸಿದರು. ಸರ್ಕಾರ ವಾಹನಗಳ ವಿಮೆ ಇಲ್ಲದೇ ಇದ್ದರೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಿದೆ. ಇದರಿಂದಲಾದ್ರೂ ವಾಹನಗಳ ಮಾಲಿಕರು ತಮ್ಮ ವಾಹನಗಳ ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ಹೊಂದಲೇಬೇಕಿದೆ ಎಂದರು.
ಸಭೆಯಲ್ಲಿ ನ್ಯಾಯಾಧೀಶರಾದ ಅರವಿಂದ ಸಾಯಿಬಣ್ಣ ಹಾಗರಗಿ, ಪ್ರೇಮಕುಮಾರ್, ಬಿ.ಶಿಲ್ಪಾ, ಸುಷ್ಮಾ, ಸರ್ಕಾರಿ ಅಭಿಯೋಜಕ ಅರ್ಜುನ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಮಂಜುನಾಥ್, ಕಾರ್ಯದರ್ಶಿ ಎ.ಕೃಷ್ಣ ಮೂರ್ತಿ, ಬಿಇಒ ಆರ್.ರಂಗಪ್ಪ, ಸರ್ಕಲ್ ಇನ್ Õಪೆಕ್ಟರ್ ಹರೀಶ್, ಇನ್ಸ್‌ಪೆಕ್ಟರ್ ಮುನಿಕೃಷ್ಣ, ನಗರ ಸಬ್‌ಇನ್ಸ್‌ಪೆಕ್ಟರ್ ರೇಣುಕಾಯಾದವ್ ಇದ್ದರು.