Advertisement

Rashtrapati Bhavan: ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ಮತ್ತು ಅಶೋಕ ಹಾಲ್​ಗೆ ನೂತನ ಹೆಸರು

03:41 PM Jul 25, 2024 | Team Udayavani |

ನವದೆಹಲಿ: ರಾಷ್ಟ್ರಪತಿ ಭವನದಲ್ಲಿರುವ ಎರಡು ಪ್ರಮುಖ ಸಭಾಂಗಣಗಳಾದ ದರ್ಬಾರ್ ಹಾಲ್ ಮತ್ತು ಅಶೋಕ ಹಾಲ್ ಹೆಸರನ್ನು ಬದಲಾಯಿಸಲಾಗಿದೆ.

Advertisement

ಅದರಂತೆ ಇನ್ನು ಮುಂದೆ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಎಂದೂ ಅಶೋಕ ಹಾಲ್ ಅನ್ನು ‘ಅಶೋಕ ಮಂಟಪ’ ಎಂದೂ ಮರುನಾಮಕರಣ ಮಾಡಲಾಗಿದೆ. ಹೆಸರು ಬದಲಾವಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಗುರುವಾರ (ಜುಲೈ 24) ರಾಷ್ಟ್ರಪತಿ ಭವನ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದ್ದು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅನೇಕ ಪ್ರಮುಖ ಕಟ್ಟಡಗಳ ಮತ್ತು ರಸ್ತೆಗಳ ಹೆಸರುಗಳನ್ನು ಸಹ ಮರುನಾಮಕರಣ ಮಾಡಲಾಗಿದೆ ಎನ್ನಲಾಗಿದೆ.

ರಾಷ್ಟ್ರೀಯ ಪ್ರಶಸ್ತಿ ಪ್ರಧಾನದಂತಹ ಪ್ರಮುಖ ಸಮಾರಂಭಗಳು ಮತ್ತು ಕಾರ್ಯಕ್ರಮಗಳನ್ನು ‘ದರ್ಬಾರ್ ಹಾಲ್’ನಲ್ಲಿ ಆಯೋಜಿಸಲಾಗುತ್ತದೆ. ದರ್ಬಾರ್ ಎಂಬ ಪದವು ಭಾರತೀಯ ಆಡಳಿತಗಾರರು ಮತ್ತು ಬ್ರಿಟಿಷರ ನ್ಯಾಯಾಲಯಗಳು ಮತ್ತು ಸಭೆಗಳಿಗೆ ಸಂಬಂಧಿಸಿದೆ, ಅಲ್ಲಿ ಅವರು ತಮ್ಮ ಕಾರ್ಯಗಳನ್ನು ಆಯೋಜಿಸುತ್ತಿದ್ದರು. ಭಾರತ ಗಣರಾಜ್ಯವಾದ ನಂತರ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಗಣರಾಜ್ಯದ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದೆ, ಆದ್ದರಿಂದ ದರ್ಬಾರ್ ಹಾಲ್‌ನ ಹೆಸರನ್ನು ‘ಗಣತಂತ್ರ ಮಂಟಪ’ ಎಂದು ಹೆಸರು ಸಾಕಷ್ಟು ಸೂಕ್ತವಾಗಿದೆ ಎನ್ನಲಾಗಿದೆ.

Advertisement

ಇದನ್ನೂ ಓದಿ: Mohammed Shami; ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್‌ ಶಮಿ! ಸ್ನೇಹಿತ ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next