Advertisement

ಸ್ಟೈಲಿಶ್ ಸ್ಟಾರ್ ಜೊತೆ ಸ್ಟೆಪ್ ಹಾಕಲು ರೆಡಿಯಾದ ರಶ್ಮಿಕಾ

07:39 AM Jun 18, 2020 | Lakshmi GovindaRaj |

ಚಮಕ್‌ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯಕ್ಕೆ ದಕ್ಷಿಣ ಭಾರತದ ಬ್ಯುಸಿಯೆಸ್ಟ್ ನಟಿಯಾಗಿದ್ದು, ದೊಡ್ಡ ಸ್ಟಾರ್ ನಟರ ಜೊತೆಗೆ ಸಾಲು ಸಾಲು ಸಿನಿಮಾಗಳಿವೆ. ಹೌದು! ವಿಜಯ್ ದೇವರಕೊಂಡ, ನಿತಿನ್, ಮಹೇಶ್ ಬಾಬು ಬಳಿಕ ಇದೀಗ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೆ ಹೊಸ ಚಿತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ.

Advertisement

ಸ್ಟಾರ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ “ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದು, ಇದೊಂದು ಪಿರಿಯಾಡಿಕ್ ಚಿತ್ರವಾಗಿದೆ. ಅಲ್ಲದೇ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದು, ಲಾಕ್​​ಡೌನಿಗೂ ಮೊದಲೇ “ಪುಷ್ಪ’ ಸಿನಿಮಾದ ಫಸ್ಟ್ ಶೆಡ್ಯೂಲ್ ಆರಂಭವಾಗಿತ್ತು. ಇದೀಗ ಲಾಕ್​​ಡೌನ್​ನಿಂದ ರಿಲೀಫ್ ಸಿಕ್ಕಿರುವುದರಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಅಣಿಯಾಗುತ್ತಿದೆ.

ಇನ್ನು ಎರಡನೇ ಹಂತದ ಚಿತ್ರೀಕರಣ ರೊಮ್ಯಾಂಟಿಕ್‌ ಹಾಡಿನಿಂದ ಶುರುವಾಗುತ್ತಿದ್ದು, ಈ ಹಾಡಿನ ಶೂಟಿಂಗ್‌ನಲ್ಲಿ ರಶ್ಮಿಕಾ ಕೂಡ ಭಾಗಿಯಾಗುತ್ತಿದ್ದಾರೆ. ಮುಖ್ಯವಾಗಿ ಡ್ಯಾನ್ಸ್ ವಿಚಾರದಲ್ಲಿ ರಶ್ಮಿಕಾ ಟಾಲಿವುಡ್ ಮಂದಿಯ ಎಕ್ಸ್‌ಪ್ರೆಷನ್‌ ಕ್ವೀನ್‌ ಆಗಿದ್ದು, ಸರಿಲೇರು ನೀಕೆವ್ವರು, ಭೀಷ್ಮ ಸಿನಿಮಾದ ಡ್ಯಾನ್ಸ್​​ನಿಂದ ಮತ್ತಷ್ಟು ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇದೀಗ ಸ್ಟೈಲಿಶ್​​ ಸ್ಟಾರ್ ಅಲ್ಲು ಅರ್ಜುನ್ ಜೊತೆಗೂ ಕೂಡಾ ಭರ್ಜರಿ ಸ್ಟೆಪ್‌ ಹಾಕಲಿದ್ದಾರಾ ಅನ್ನೋದು ಸದ್ಯಕ್ಕೆ ಅಭಿಮಾನಿಗಳ ಕುತೂಹಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next