Advertisement

ವಿಜಯ್‌ ದೇವರಕೊಂಡ ಆಯಿತು ಈಗ ಬೆಲ್ಲಂಕೊಂಡ ಜೊತೆ ರಶ್ಮಿಕಾ ಡೇಟಿಂಗ್?: ಫೋಟೋಸ್‌ ವೈರಲ್

05:06 PM Apr 01, 2023 | Team Udayavani |

ಹೈದರಾಬಾದ್: ಬಹುಭಾಷಾ ಬೆಡಗಿ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ʼಕಿರಿಕ್‌ ಪಾರ್ಟಿʼ ನಟಿ ಇದೀಗ ಡೇಟಿಂಗ್‌ ವಿಚಾರದಲ್ಲಿ ಮತ್ತೆ ಚರ್ಚೆಗೆ ಬಂದಿದ್ದಾರೆ.

Advertisement

ʼಗೀತಾ ಗೋವಿಂದಂʼ ನಟಿ ವಿಜಯ್ ದೇವರಕೊಂಡ ಅವರೊಂದಿಗೆ ಆತ್ಮೀಯವಾಗಿ ಇರುವುದು ಗೊತ್ತೇ ಇದೆ.  ಇಬ್ಬರೂ ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ವರ್ಷದಂದು ಮಾಲ್ಡೀವ್ಸ್‌ ನಲ್ಲಿ ಇಬ್ಬರೂ ಜೊತೆಯಾಗಿಯೇ ಸುತ್ತಾಡಿದ್ದರು ಎನ್ನಲಾಗಿತ್ತು. ಇದೆಲ್ಲದರ ನಡುವೆ ರಶ್ಮಿಕಾ – ದೇವರಕೊಂಡ ಜಸ್ಟ್‌ ಫ್ರೆಂಡ್ಸ್‌ ಎನ್ನುವುದನ್ನು ಸ್ವತಃ ರಶ್ಮಿಕಾ ಅವರೇ ಈ ಹಿಂದೆ ಹೇಳಿದ್ದಾರೆ.

ಆದರೀಗ ನಟಿ ರಶ್ಮಿಕಾ ಟಾಲಿವುಡ್‌ ನಟ ಬೆಲ್ಲಂಕೊಂಡ ಶ್ರೀನಿವಾಸ್ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇತ್ತೀಚೆಗೆ ಮುಂಬೈ ಏರ್‌ ಪೋರ್ಟ್‌ ನಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು, ರಶ್ಮಿಕಾ – ಬೆಲ್ಲಂಕೊಂಡ ಶ್ರೀನಿವಾಸ್ ಡೇಟಿಂಗ್‌ ಬಗ್ಗೆ ಗಾಸಿಪ್‌ ಹಬ್ಬಿದೆ.

ರಶ್ಮಿಕಾ – ರಶ್ಮಿಕಾ – ಬೆಲ್ಲಂಕೊಂಡ ಕಳೆದ ಕೆಲ ಸಮಯದಿಂದ ಒಟ್ಟಾಗಿ ತಿರುಗಾಡುತ್ತಿದ್ದಾರೆ. ಇಬ್ಬರು ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಇಬ್ಬರು ಡೇಟಿಂಗ್‌ ನಲ್ಲಿರುವ ಸಾಧ್ಯತೆಯಿದೆ. ಜನರ ಊಹೆ ಸತ್ಯವಾಗಿರಬಹುದು ಎಂದು “ಈಟೈಮ್ಸ್”‌ ವರದಿ ಮಾಡಿದೆ.

ರಶ್ಮಿಕಾ ʼವಾರಿಸುʼ, ʼಮಿಷನ್‌ ಮಜ್ನುʼ ಸಿನಿಮಾ ಹಿಟ್‌ ಆದ ಸಂತಸದಲ್ಲಿದ್ದು, ಬೆಲ್ಲಂಕೊಂಡ ʼಛತ್ರಪತಿʼ  ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next