Advertisement

 ನಟಿ ರಶ್ಮಿಕಾ  ಮಂದಣ್ಣ ಜತೆ ಮದುವೆ ವದಂತಿಗೆ ತೆರೆ‌

01:19 AM Feb 23, 2022 | Team Udayavani |

ಹೈದರಾಬಾದ್‌: ಕನ್ನಡದ ಜನಪ್ರಿಯ ನಾಯಕಿ ನಟಿ ರಶ್ಮಿಕಾ ಮಂದಣ್ಣ ಜತೆಗೆ ಮದುವೆ ಎಂಬ ಗಾಸಿಪ್‌ ಗಳಿಗೆ ತೆಲುಗು ಚಿತ್ರ ನಟ ವಿಜಯ ದೇವರಕೊಂಡ ತೆರೆ ಎಳೆದಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ದೇವರಕೊಂಡ ಸುಮ್ಮನೆ ವದಂತಿ ಹಬ್ಬಿಸಲಾಗುತ್ತಿದೆ. ಅದರಲ್ಲೇನೂ ಸತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಕೆಲವು ದಿನಗಳಿಂದ ಈಚೆಗೆ ವಿಜಯ ದೇವರಕೊಂಡ ಮತ್ತು ರಕ್ಷಿತಾ ಮಂದಣ್ಣ ಹಲವು ಕಾರ್ಯಕ್ರಮಗಳಲ್ಲಿ, ಔತಣ ಕೂಟಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಅವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಮತ್ತು ಶೀಘ್ರವೇ ಮದುವೆಯಾಗಲಿದ್ದಾರೆ ಎಂದು ಬಿಂಬಿಸುವಂಥ ವರದಿಗಳು ಪ್ರಕಟವಾಗಿದ್ದವು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next