Advertisement

ರಶ್ಮಿಕಾ ಮಂದಣ್ಣ ಎರಡನೇ ಬಾಲಿವುಡ್‌ ಚಿತ್ರ ಶುರು

10:09 AM Apr 03, 2021 | Team Udayavani |

ಹಿಂದಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ನಟಿಸುತ್ತಿರುವ “ಮಿಷನ್‌ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ರಶ್ಮಿಕಾ ಮಂದಣ್ಣಗೆ ಮೊದಲ ಹಿಂದಿ ಸಿನಿಮಾ. ಈಗಾಗಲೇ “ಮಿಷನ್‌ ಮಜ್ನು’ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮೊದಲ ಹಂತದ ಶೂಟಿಂಗ್‌ ಕೂಡ ಪೂರ್ಣಗೊಂಡಿದೆ.

Advertisement

ಇನ್ನು ಬಾಲಿವುಡ್‌ನ‌ಲ್ಲಿ ತಮ್ಮ ಮೊದಲ ಸಿನಿಮಾ ಪೂರ್ಣವಾಗುವ ಮೊದಲೇ, ನಟಿ ರಶ್ಮಿಕಾ ಮಂದಣ್ಣ ಮತ್ತೂಂದು ಹಿಂದಿ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನ‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಮತ್ತೆ ಆತಂಕದಲ್ಲಿ ಕನ್ನಡ ಚಿತ್ರರಂಗ: ಸಿನಿಮಾ ಬಿಡುಗಡೆಯಲ್ಲಿ ಆಗಲಿದೆ ವ್ಯತ್ಯಯ

ಹೌದು, ಅಮಿತಾಭ್‌ ಬಚ್ಚನ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಗುಡ್‌ ಬೈ’ ಸಿನಿಮಾದಲ್ಲಿ, ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ಕೂಡ ನೆರವೇರಿದ್ದು, ಚಿತ್ರದ ಶೂಟಿಂಗ್‌ ಕೂಡ ಇದೇ ತಿಂಗಳು ಶುರುವಾಗಲಿದೆ ಎನ್ನಲಾಗುತ್ತಿದೆ.

ಇನ್ನು “ಗುಡ್‌ ಬೈ’ ಸಿನಿಮಾವನ್ನು ವಿಕಾಸ್‌ ಭಾಲ್‌ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಯೊಳಗೆ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ಅಭಿನಯಿಸುತ್ತಿರುವ ಎರಡು ಸಿನಿಮಾಗಳು ಬಿಡುಗಡೆಯಾಗುವುದು ಬಹುತೇಕ ಪಕ್ಕ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next