Advertisement
ಕಾಸ್ಮೋಪಾಲಿಟನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ, ನಟಿ ಯಾವುದೇ ನಟನ ಹೆಸರನ್ನು ಹೇಳಲಿಲ್ಲ. ಆದರೆ ಜೀವನದ ಪ್ರತಿ ಹಂತದಲ್ಲೂ ತನಗೆ ಸಂಗಾತಿ ಬೇಕು ಎಂದು ಆತ್ಮವಿಶ್ವಾಸದಿಂದ ಹೇಳಿದರು. ತನ್ನ ಜೀವನದಲ್ಲಿ ಪ್ರೀತಿಯ ಅರ್ಥವೇನು ಮತ್ತು ತನ್ನ ಸಂಗಾತಿಗೆ ಯಾವ ಆದ್ಯತೆಗಳನ್ನು ನೀಡಲು ಇಷ್ಟಪಡುತ್ತೇನೆ ಎಂದು ಹೇಳಿದರು. ”ನನ್ನ ಸಂಗಾತಿ. ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನಗೆ ನನ್ನ ಜತೆಯಾಗಿರಬೇಕು. ನನಗೆ ಆ ಸಾಂತ್ವನ, ಭದ್ರತೆ ಮತ್ತು ಸಹಾನುಭೂತಿ ಬೇಕು” ಎಂದರು.
Related Articles
Advertisement
”ಪ್ರೀತಿ ಎಂದರೆ ಸಂಗಾತಿಯೊಂದಿಗೆ ಗಟ್ಟಿಯಾದ ಬಾಂಧವ್ಯ. ಜೀವನದ ವಿವಿಧ ಹಂತಗಳಲ್ಲಿ ಯಾರಾದರೂ ನಿಮ್ಮೊಂದಿಗೆ ಇರುವುದೇ ಪ್ರೀತಿ. ಬಂಡೆಯಂತೆ ನಮ್ಮೊಂದಿಗೆ ನಿಲ್ಲಬೇಕು ಮತ್ತು ಜೀವನದ ಎಲ್ಲಾ ಸಂದರ್ಭಗಳನ್ನು ಆಚರಿಸಬೇಕು” ಎಂದು ರಶ್ಮಿಕಾ ಹೇಳಿದರು.