ಮುಂಬಯಿ: ʼಕಿರಿಕ್ ಪಾರ್ಟಿʼ ಬೆಡಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ವರ್ಷದ ಆರಂಭದಲ್ಲೇ ʼವಾರಿಸುʼ ಮೂಲಕ ಬ್ರೇಕ್ ಪಡೆದುಕೊಂಡಿದ್ದಾರೆ. ವಿಶ್ವದೆಲ್ಲೆಡೆ ದಳಪತಿ ವಿಜಯ್ ʼವಾರಿಸುʼ ಸಖತ್ ಸದ್ದು ಮಾಡುತ್ತಿದೆ.
ಟಾಲಿವುಡ್ ನ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅವರ ʼಪುಷ್ಪʼ ಪಾರ್ಟ್ -1 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿತ್ತು. ಶ್ರೀವಲ್ಲಿಯಾಗಿ ರಶ್ಮಿಕಾ ಪ್ರೇಕ್ಷಕರ ಮನ ಗೆದ್ದಿದ್ದರು. ಸುಕುಮಾರ್ ಅವರ ʼಪುಷ್ಪ-2ʼ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟಿಸಿದೆ.
ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇತ್ತೀಚೆಗೆ ಪುಷ್ಪ ಸೀಕ್ವೆಲ್ ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ತೆಗೆದಯ ಹಾಕಲಾಗಿದೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಸಾಯಿ ಪಲ್ಲವಿ ರಶ್ಮಿಕಾ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.
ಇದನ್ನೂ ಓದಿ: ಬೀದಿ ನಾಯಿಗೆ ಆಹಾರ ನೀಡುವ ವೇಳೆ ಯುವತಿ ಮೇಲೆ ಹರಿದ ಕಾರು: ಗಂಭೀರ
ಆದರೆ ಈ ಎಲ್ಲದಕ್ಕೂ ರಶ್ಮಿಕಾ ಅವರು ಒಂದೇ ಮಾತಿನಲ್ಲಿ ಉತ್ತರಿಸಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತಾನಾಡಿರುವ ಅವರು ʼಮುಂದಿನ ತಿಂಗಳು ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದೇನೆ. ಪುಷ್ಪ-2 ನಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ” ಎಂದಿದ್ದಾರೆ.
ಸದ್ಯ ಸಿದ್ದಾರ್ಥ್ ಮಲ್ಹೋತ್ರ ಅವರೊಂದಿಗೆ ನಟಿಸಿರುವ ʼಮಿಷನ್ ಮಜ್ನುʼ ಸಿನಿಮಾದ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಜ.20 ರಂದು ನೆಟ್ ಫ್ಲಿಕ್ಸ್ ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ಇದಲ್ಲದೆ ರಶ್ಮಿಕಾ ಮಂದಣ್ಣ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯವನ್ನು ಕೋರಿದ್ದು, ಮೊದಲು ಕನ್ನಡದಲ್ಲಿ ಹಬ್ಬದ ಶುಭಾಶಯವನ್ನು ಕೋರಿದ್ದು, ನೆಟ್ಟಿಗರು ಮತ್ತೆ ಚರ್ಚೆ ಹುಟ್ಟು ಹಾಕಿದೆ.