Advertisement

ಸೌತ್ ಆಯ್ತು ,ಈಗ ಬಿ ಟೌನ್ ಪಯಣ ಬೆಳೆಸಿದ ರಶ್ಮಿಕಾ : ಬಾಲಿವುಡ್ ನಲ್ಲಿ ಕಿರಿಕ್ ಬೆಡಗಿ ಮಿಂಚು

08:15 PM Dec 24, 2020 | Suhan S |

ಮುಂಬಯಿ :  ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಸೌತ್ ಸಿನಿ ದುನಿಯಾದಲ್ಲಿ ಮೋಡಿ ಮಾಡುತ್ತಿದ್ದಾರೆ. ತನ್ನ ನಟನಾ ಕೌಶಲ್ಯದಿಂದ ಹೆಸರು ಮಾಡುತ್ತಿರುವ ರಶ್ಮಿಕಾಗೆ ಬಿ ಟೌನ್ ಅವಕಾಶದ ಬಾಗಿಲು ತೆರೆದಿದೆ.

Advertisement

ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರ ನಟಿಸುತ್ತಿರುವ ‘ಮಿಷನ್ ಮಜ್ನು’ ಚಿತ್ರದಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ  ಸಂಭ್ರಮವನ್ನು ನಟಿ ರಶ್ಮಿಕಾ ಚಿತ್ರದ ಪೋಸ್ಟರ್ ಒಂದನ್ನು ಹಾಕಿ ಬಾಲಿವುಡ್ ಜರ್ನಿಯ ಮೊದಲ ಹೆಜ್ಜೆಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಗೆ ಕಾಲಿಡುತ್ತಿರುವ ರಶ್ಮಿಕಾ ಮಂದಣ್ಣನ ಕುರಿತು ಚಿತ್ರದ ನಾಯಕ ಸಿದ್ದಾರ್ಥ್ ಮಲ್ಹೋತ್ರ ಟ್ವೀಟ್ ಮೂಲಕ “ಸ್ವಾಗತ ರಶ್ಮಿಕಾ, ಮಿಷನ್ ಮಜ್ನು ಚಿತ್ರ ತಂಡದೊಟ್ಟಿಗೆ ನಿಮ್ಮನ್ನು ನೋಡಲು ಖುಷಿಯಾಗುತ್ತದೆ, ಆದಷ್ಟು ಬೇಗ ಸಿಗೋಣ” ಎಂದು ತಿಳಿಸಿದ್ದಾರೆ.

ಇನ್ನು ‘ಮಿಷನ್ ಮಜ್ನು’ ನೈಜ ಕಥಾ ಹಂದರವನ್ನು ಹೊಂದಿದ್ದು, ಇದರಲ್ಲಿ ಸಿದ್ದಾರ್ಥ್ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಶಾಂತನು ಬಾಗ್ಚಿ ಅವರ ಮೊದಲ ಚಿತ್ರ ಇದಾಗಿದ್ದು, ‘ಉರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದ, ರೋನಿ ಸ್ಕ್ರೂವಾಲಾ ಮಿಷನ್ ಮಜ್ನು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಸಿನಿ ಮಂದಿಯ ಗಮನ ಸೆಳೆಯುತ್ತಿದೆ.

ರಶ್ಮಿಕಾ ಮಂದಣ್ಣ ಬಾಲಿವುಡ್ ರ್ಯಾಪರ್ ಬಾದ್ ಷಾ ಅವರ ಆಲ್ಬಂ ಸಾಂಗ್ ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಆಲ್ಬಂ ಸಾಂಗ್ ನ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next