Advertisement

ಅಫ್ಘಾನ್‌ ತಂಡದಲ್ಲಿ ರಶೀದ್‌ ಖಾನ್‌, ಮುಜೀಬ್‌

06:00 AM May 30, 2018 | Team Udayavani |

ಬೆಂಗಳೂರು: ಭಾರತ ವಿರುದ್ಧ ಜೂನ್‌ 14ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಐತಿಹಾಸಿಕ ಏಕೈಕ ಟೆಸ್ಟ್‌ಗೆ 15 ಸದಸ್ಯರ ಬಲಿಷ್ಠ ಅಫ್ಘಾನಿಸ್ಥಾನ ತಂಡವನ್ನು ಪ್ರಕಟಿಸಲಾಗಿದೆ. ವಿಶ್ವಖ್ಯಾತಿಯ ಟಿ20 ಬೌಲರ್‌ ರಶೀದ್‌ ಖಾನ್‌ ಸಹಿತ ನಾಲ್ವರು ಸ್ಪಿನ್‌ ದಾಳಿಯ ನೇತೃತ್ವ ವಹಿಸಲಿದ್ದಾರೆ.

Advertisement

ಐಪಿಎಲ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ್ದ ರಶೀದ್‌ ಮತ್ತು ಯುವ ಕ್ರಿಕೆಟಿಗ ಮುಜೀಬ್‌ ಉರ್‌ ರೆಹಮಾನ್‌ ಅವರಲ್ಲದೇ ಚೈನಾಮನ್‌ ಝಾಹಿರ್‌ ಖಾನ್‌ ಮತ್ತು ಎಡಗೈ ಆಮಿರ್‌ ಹಾಟಕ್‌ ಅವರು ಅಸರ್‌ ಸ್ಟಾನಿಜಾಯ್‌ ನಾಯಕತ್ವದ ತಂಡದಲ್ಲಿದ್ದಾರೆ. 

ರಶೀದ್‌ ಮತ್ತು ಮುಜೀಬ್‌ ಟಿ20 ಕ್ರಿಕೆಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿ ವಿಶ್ವದ ಗಮನ ಸೆಳೆದಿದ್ದಾರೆ. ಐಪಿಎಲ್‌ನಲ್ಲಿ ಹೈದರಾಬಾದ್‌ ತಂಡದ ಪರ ಆಡಿದ್ದ ರಶೀದ್‌ ಶ್ರೇಷ್ಠ ಬೌಲಿಂಗ್‌ ನಿರ್ವಹಣೆ ನೀಡಿದ್ದರಿಂದ ತಂಡ ಫೈನಲ್‌ ಹಂತಕ್ಕೇರಲು ಯಶಸ್ವಿಯಾಗಿತ್ತು. ಆದರೆ ಟೆಸ್ಟ್‌ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಹೇಗೆ ದಾಳಿ ಸಂಘಟಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ. ರಶೀದ್‌ ಇಷ್ಟರವರೆಗೆ ನಾಲ್ಕು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರೆ 17ರ ಹರೆಯದ ಮುಜೀಬ್‌ ಟೆಸ್ಟ್‌ನಲ್ಲಿ ಇನ್ನು ಆಡಬೇಕಾಗಿದೆ.

ಗಾಯದಿಂದಾಗಿ ಅಫ್ಘಾನಿಸ್ಥಾನವು ತನ್ನ ಅನುಭವಿ ಬೌಲರೊಬ್ಬರನ್ನು ಕಳೆದುಕೊಂಡಿದೆ. ದೌಲತ್‌ ಜದ್ರಾನ್‌ ಅವರ ಅನುಪಸ್ಥಿತಿಯಲ್ಲಿ ಯಾಮಿನ್‌ ಅಹ್ಮದ್‌ಜಾಯ್‌ ವಫಾದರ್‌ ಮತ್ತು ಸಯ್ಯದ್‌ ಅಹ್ಮದ್‌ ಶಿರ್ಜಾದ್‌ ವೇಗದ ದಾಳಿಯ ನೇತೃತ್ವ ವಹಿಸಲಿದ್ದಾರೆ. 

ರಶೀದ್‌ ಮೇಲೆ ಎಲ್ಲರ ಕಣ್ಣು
ನಿಸ್ಸಂದೇಹವಾಗಿ ಎಲ್ಲರ ಕಣ್ಣು ರಶೀದ್‌ ಖಾನ್‌ ಅವರ ನಿರ್ವಹಣೆಯ ಮೇಲೆ ಇರಲಿದೆ. ಟ್ವೆಂಟಿ20ಲ್ಲಿ ಅವರು ನಿಜವಾಗಿಯೂ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ಸನ್‌ರೈಸರ್ ಪರ ಅವರು ಅತ್ಯದ್ಭುತ ಪ್ರದರ್ಶನಗೈದಿದ್ದಾರೆ. ಅವರೊಬ್ಬ ಉತ್ತಮ ಗುಣಮಟ್ಟದ ಬೌಲರ್‌ ಆಗಿದ್ದಾರೆ. ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಮತ್ತು ಗೌರವ ಕೊಡುತ್ತಾರೆ. ಹಾಗಾಗಿ ಅಫ್ಘಾನಿಸ್ಥಾನವನ್ನು ಹಗುರವಾಗಿ ಕಾಣಲು ಸಾಧ್ಯವಿಲ್ಲ ಎಂದು ಭಾರತ ತಂಡದ ಪ್ರಭಾರ ನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.

Advertisement

ಟೆಸ್ಟ್‌ಗೆ ಅರ್ಹತೆ ದೊಡ್ಡ ವಿಷಯ
ಅಫ್ಘಾನಿಸ್ಥಾನ ಕ್ರಿಕೆಟ್‌ ಪಾಲಿಗೆ ಟೆಸ್ಟ್‌ಗೆ ಅರ್ಹತೆ ಗಳಿಸುವುದೇ ದೊಡ್ಡ ವಿಷಯ. ಇದು ಕ್ರಿಕೆಟ್‌ಗೆ ಒಳ್ಳೆಯದೇ ಆಗಿದೆ. ನಾವು ಯಾವುದೇ ತಂಡವನ್ನು ಹಗುರವಾಗಿ ಕಾಣುವುದಿಲ್ಲ. ಪ್ರತಿಯೊಂದು ತಂಡದ ವಿರುದ್ಧವೂ ತೀವ್ರ ಹೋರಾಟದಿಂದ ಆಡುತ್ತೇವೆ ಎಂದು ರಹಾನೆ ತಿಳಿಸಿದರು. 

ಅಫ್ಘಾನಿಸ್ಥಾನ ತಂಡ
ಅಸYರ್‌ ಸ್ಟಾನಿಜಾಯ್‌, ಮೊಹಮ್ಮದ್‌ ಶಹಜಾದ್‌, ಜಾವೆದ್‌ ಅಹ್ಮದಿ, ರಹಮತ್‌ ಶಾ, ಇಶಾನುಲ್ಲ ಜನತ್‌, ನಾಸಿರ್‌ ಜಮಾಲ್‌, ಹಷು¾ತುಲ್ಲಾ ಶಾಹಿದಿ, ಅಫಾÕರ್‌ ಜಜಾಯ್‌, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ಜಾಹಿರ್‌ ಖಾನ್‌, ಆಮಿರ್‌ ಹಂಝ ಹಾಟಕ್‌, ಸಯ್ಯದ್‌ ಅಹ್ಮದ್‌ ಶಿರ್ಜಾದ್‌, ಯಾಮಿನ್‌ ಅಹ್ಮದ್‌ಜಾಯ್‌, ಮುಜೀಬ್‌ ಉರ್‌ ರೆಹಮಾನ್‌.

Advertisement

Udayavani is now on Telegram. Click here to join our channel and stay updated with the latest news.

Next