Advertisement
ರವಿವಾರ ರಾತ್ರಿ ಡೆಹ್ರಾಡೂನ್‌ನಲ್ಲಿ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ರಶೀದ್ ಖಾನ್ ಈ ಸಾಧನೆಗೈದರು. ಇದರೊಂದಿಗೆ 32 ರನ್ನುಗಳ ಗೆಲುವು ಸಾಧಿಸಿದ ಅಫ್ಘಾನಿಸ್ಥಾನ, ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡಿತು.
ರಶೀದ್ ಖಾನ್ ಸಾಧನೆ 27ಕ್ಕೆ 5 ವಿಕೆಟ್. 16ನೇ ಓವರಿನ ಕೊನೆಯ ಎಸೆತದಲ್ಲಿ ಕೆವಿನ್ ಓ’ಬ್ರಿಯಾನ್ ವಿಕೆಟ್ ಕಿತ್ತ ರಶೀದ್ ಖಾನ್, ಬಳಿಕ ತಮ್ಮ ಮುಂದಿನ ಓವರಿನ ಮೊದಲ 3 ಎಸೆತಗಳಲ್ಲಿ ಜಾರ್ಜ್ ಡಾಕ್ರೆಲ್, ಶೇನ್ ಜೆಟ್‌ಕೇಟ್ ಮತ್ತು ಸಿಮಿ ಸಿಂಗ್ ವಿಕೆಟ್ ಹಾರಿಸಿ ಮೆರೆದರು.
Related Articles
Advertisement
ಅಫ್ಘಾನಿಸ್ಥಾನ ಪರ ಮೊಹಮ್ಮದ್ ನಬಿ 36 ಎಸೆತಗಳಿಂದ 81 ರನ್ ಬಾರಿಸಿದರು (6 ಬೌಂಡರಿ, 7 ಸಿಕ್ಸರ್). ಐರ್ಲೆಂಡ್ ಸರದಿಯಲ್ಲಿ ಆರಂಭಕಾರ ಕೆವಿನ್ ಓ’ಬ್ರಿಯಾನ್ 74 ರನ್ ಹೊಡೆದರು (47 ಎಸೆತ, 5 ಬೌಂಡರಿ, 3 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ಥಾನ-7 ವಿಕೆಟಿಗೆ 210 (ನಬಿ 81, ಹಜ್ರತುಲ್ಲ 31, ರ್‍ಯಾಂಕಿನ್ 53ಕ್ಕೆ 3). ಐರ್ಲೆಂಡ್-8 ವಿಕೆಟಿಗೆ 178 (ಓ’ಬ್ರಿಯಾನ್ 74, ಬಾಲ್ಬಿರ್ನಿ 47, ರಶೀದ್ 27ಕ್ಕೆ 5, ಜಿಯಾವುರ್ ರೆಹಮಾನ್ 42ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಮೊಹಮ್ಮದ್ ನಬಿ.
ಟಿ20 ಹ್ಯಾಟ್ರಿಕ್ ಸಾಧಕರುಬೌಲರ್ ವಿರುದ್ಧ ತಾಣ ವರ್ಷ
ಬ್ರೆಟ್ ಲೀ (ಆ) ಬಾಂಗ್ಲಾದೇಶ ಕೇಪ್‌ಟೌನ್ 2007-08
ಜೇಕಬ್ ಓರಮ್ (ನ್ಯೂ) ಶ್ರೀಲಂಕಾ ಕೊಲಂಬೊ 2009
ಟಿಮ್ ಸೌಥಿ (ನ್ಯೂ) ಪಾಕಿಸ್ಥಾನ ಆಕ್ಲೆಂಡ್ 2010-11
ತಿಸರ ಪೆರೆರ (ಶ್ರೀ) ಭಾರತ ರಾಂಚಿ 2015-16
ಲಸಿತ ಮಾಲಿಂಗ (ಶ್ರೀ) ಬಾಂಗ್ಲಾದೇಶ ಕೊಲಂಬೊ 2016-17
ಫಾಹಿಮ್ ಅಶ್ರಫ್ (ಪಾ) ಶ್ರೀಲಂಕಾ ಅಬುಧಾಬಿ 2017-18
ರಶೀದ್ ಖಾನ್ (ಅ) ಐರ್ಲೆಂಡ್ ಡೆಹ್ರಾಡೂನ್ 2018-19