Advertisement

ರಶೀದ್‌ ಖಾನ್‌ ಅತೀ ಕಿರಿಯ ನಾಯಕ ?

07:30 AM Feb 28, 2018 | |

ಹೊಸದಿಲ್ಲಿ: ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ 19ರ ಹರೆಯದ ರಶೀದ್‌ ಖಾನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದ ಅತ್ಯಂತ ಕಿರಿಯ ನಾಯಕರೆಂದು ಕರೆಸಿಕೊಳ್ಳುವ ಸಾಧ್ಯತೆಯಿದೆ. 

Advertisement

ಏಕದಿನ ಮತ್ತು ಟ್ವೆಂಟಿ20 ಕ್ರಿಕೆಟ್‌ನ ವಿಶ್ವದ ನಂಬರ್‌ ವನ್‌ ಬೌಲರ್‌ ಆಗಿರುವ ರಶೀದ್‌ ಖಾನ್‌ ಅವರು ಅಫ್ಘಾನಿಸ್ಥಾನ ತಂಡವನ್ನು ಮುನ್ನಡೆಸಲಿದ್ದಾರೆ. ಹಾಲಿ ನಾಯಕ ಅಸರ್‌ ಸ್ಟಾನಿಜಾಯ್‌ ಅವರು ಅಪೆಂಡಿಸಿಟಿಸ್‌ನಿಂದ ಬಳಲುತ್ತಿದ್ದಾರೆ. 10 ದಿನಗಳ ಬಳಿಕವಷ್ಟೇ ಅವರು ಕ್ರಿಕೆಟಿಗೆ ಮರಳಬಹುದೆಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಹಾಲಿ ಉಪನಾಯಕರಾಗಿರುವ ರಶೀದ್‌ ಖಾನ್‌ ಅವರು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅಫ್ಘಾನ್‌ ಕ್ರಿಕೆಟ್‌ ಮಂಡಳಿಯ ಪ್ರಕಟನೆ ತಿಳಿಸಿದೆ.

ಐಸಿಸಿ ವಿಶ್ವಕಪ್‌ ಅರ್ಹತಾ ಕೂಟದ ಬಣ ಹಂತದ ಪಂದ್ಯಗಳಿಗಾಗಿ ಅಫ್ಘಾ ನಿಸ್ಥಾನ ತಂಡವು ಬುಲಾವಾಯೊಗೆ ತೆರಳಲಿದೆ. ಮಾರ್ಚ್‌ 4ರಂದು ಸ್ಕಾಟ್ಲೆಂಡ್‌ ತಂಡವನ್ನು ಎದುರಿಸುವ ಮೂಲಕ ಅಫ್ಘಾನಿಸ್ಥಾನ ಅಭಿಯಾನ ಆರಂಭಿಸಲಿದೆ.

ರಶೀದ್‌ ಖಾನ್‌ ಕಳೆದ ವಾರವಷ್ಟೇ ಏಕದಿನ ಮತ್ತು ಟ್ವೆಂಟಿ20 ಮಾದರಿಯ ಕ್ರಿಕೆಟ್‌ನ ವಿಶ್ವದ ನಂಬರ್‌ ವನ್‌ ಬೌಲರ್‌ ಆಗಿ ಆಯ್ಕೆಯಾಗಿದ್ದರು. ರಶೀದ್‌ ಖಾನ್‌ ಆಡಿದ 37 ಏಕದಿನ ಪಂದ್ಯಗಳಿಂದ 86 ಮತ್ತು 29 ಟ್ವೆಂಟಿ20 ಪಂದ್ಯಗಳಿಂದ 47 ವಿಕೆಟ್‌ ಉರುಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next