Advertisement
ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಒಂದೆರಡು ತಿಂಗಳ ಹಿಂದೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭಾರತ ವಿರುದ್ಧದ ಪಂದ್ಯಗಳಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮೊಹಾಲಿಯಲ್ಲಿ ಬುಧವಾರ ನಡೆದ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ರಶೀದ್ ಅನುಪಸ್ಥಿತಿಯನ್ನು ನಾಯಕ ಇಬ್ರಾಹಿಂ ಜದ್ರಾನ್ ದೃಢಪಡಿಸಿದರು.
Related Articles
Advertisement
“ನಾವು ವಿಶ್ವದ ಅತ್ಯುತ್ತಮ ಸ್ಪಿನ್ನರ್ ಗಳನ್ನು ಹೊಂದಿದ್ದೇವೆ, ನಮ್ಮಲ್ಲಿ ವೇಗದ ಬೌಲರ್ ಗಳೂ ಇದ್ದಾರೆ. ಆದರೆ ಬ್ಯಾಟಿಂಗ್ ಕೌಶಲ್ಯಗಳನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ. ನಾವು ಕಳೆದ ಎರಡು-ಮೂರು ದಿನಗಳಿಂದ ಇಲ್ಲಿ ತರಬೇತಿ ಪಡೆಯುತ್ತಿದ್ದೇವೆ” ಎಂದು ಜದ್ರಾನ್ ಹೇಳಿದರು.
ಅಕ್ಟೋಬರ್-ನವೆಂಬರ್ ನಲ್ಲಿ ನಡೆದ ಏಕದಿನ ವಿಶ್ವಕಪ್ ನಿಂದ ರಶೀದ್ ಸ್ಪರ್ಧಾತ್ಮಕ ಆಟವನ್ನು ಆಡಿಲ್ಲ. ಇತ್ತೀಚೆಗೆ ರಶೀದ್ ಅನುಪಸ್ಥಿತಿಯಲ್ಲಿ ಅಫ್ಗಾನಿಸ್ಥಾನ ತಂಡವು ಯುಎಇ ವಿರುದ್ಧ 2-1 ಟಿ20 ಸರಣಿಯನ್ನು ಗೆದ್ದುಕೊಂಡಿತ್ತು. ಭಾರತ ವಿರುದ್ಧದ ಸರಣಿಗಾಗಿ ಅಫ್ಘಾನಿಸ್ತಾನದ ಸ್ಪಿನ್ ವರ್ಕ್‌ಲೋಡ್ ನಿಭಾಯಿಸಲು ಮುಜೀಬ್ ಉರ್ ರೆಹಮಾನ್, ಮೊಹಮ್ಮದ್ ನಬಿ, ನೂರ್ ಅಹ್ಮದ್, ಖೈಸ್ ಅಹ್ಮದ್ ಮತ್ತು ಶರಫುದ್ದೀನ್ ಅಶ್ರಫ್ ಇದ್ದಾರೆ.