Advertisement

ಬಿಬಿಎಲ್ ನಲ್ಲಿ ದಂಡಿಸಿಕೊಂಡ ಸ್ಪಿನ್ನರ್ ರಶೀದ್ ಖಾನ್

04:38 PM Jan 01, 2020 | keerthan |

ಸಿಡ್ನಿ: ಆಫ್ಘಾನಿಸ್ತಾನದ ಖ್ಯಾತ ಬೌಲರ್‌ ರಶೀದ್‌ ಖಾನ್‌ ಬಿಗ್‌ಬಾಷ್‌ ಕ್ರಿಕೆಟ್‌ ಕೂಟದಲ್ಲಿ 4 ಓವರ್‌ಗೆ 44 ದುಬಾರಿ ರನ್‌ ಬಿಟ್ಟುಕೊಟ್ಟು ಸುದ್ದಿಯಾಗಿದ್ದಾರೆ.

Advertisement

ಟಿ20 ಕ್ರಿಕೆಟ್‌ನ ಯಶಸ್ಸಿ ಬೌಲರ್‌ ಒಬ್ಬರು ಈ ರೀತಿಯಾಗಿ ದಂಡಿಸಿ ಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಅಡಿಲೇಡ್‌ ಸ್ಟ್ರೈಕರ್ ತಂಡದ ಪರ ಆಡುತ್ತಿರುವ ರಶೀದ್‌ ಖಾನ್‌ ಸಿಡ್ನಿ ಥಂಡರ್ ವಿರುದ್ಧ ಪಂದ್ಯದಲ್ಲಿ ಚಚ್ಚಿಸಿಕೊಂಡಿದ್ದಾರೆ. ಫ‌ರ್ಗ್ಯುಸನ್‌ ವಿಕೆಟ್‌ ಪಡೆಯಲು ಯಶಸ್ವಿಯಾದರೂ ರಶೀದ್‌ ಖಾನ್‌ ನಂತರದ ಹಂತದಲ್ಲಿ ಉಸ್ಮಾನ್‌ ಖವಾಜಾ ಅವರಿಂದ ಚೆನ್ನಾಗಿಯೇ ದಂಡಿಸಿಕೊಂಡರು.

ದುಬಾರಿ ರನ್‌ ನೀಡುವ ಮೂಲಕ ಆಫ್ಘಾನಿಸ್ತಾನ ಕ್ರಿಕೆಟಿಗ 2019ಕ್ಕೆ ವಿದಾಯ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next