Advertisement

ಆರೂರು: ರಾಶಿ ಪೂಜಾ ಮಹೋತ್ಸವ

01:00 AM Mar 11, 2019 | Harsha Rao |

ಬ್ರಹ್ಮಾವರ: ಭಜನೆಯು ಭಕ್ತ ಮತ್ತು ದೇವರನ್ನು ಸಂಪರ್ಕಿಸುವ ಪ್ರಭಾವಶಾಲಿ ಮಾಧ್ಯಮ ಎಂದು ಉಡುಪಿ ಶ್ರೀ ಪೇಜಾವರ ಮಠದ ಕಿರಿಯ ಶ್ರೀಪಾದರು ಹೇಳಿದರು.

Advertisement

ಅವರು ಶನಿವಾರ ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಶಾರಿಕಾ ರತ್ನಾಕರ ಶೆಟ್ಟಿ ಮತ್ತು ಉಪ್ಪೂರು ರತ್ನಾಕರ ದೂಮಣ್ಣ ಶೆಟ್ಟಿ ಹಾಗೂ ಕುಟುಂಬಸ್ಥರ ಸೇವಾರೂಪದಲ್ಲಿ ಜರಗಿದ ರಾಶಿಪೂಜಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. 

ಸೇವಾಕರ್ತರಾದ ಉಪ್ಪೂರು ರತ್ನಾಕರ ಶೆಟ್ಟಿ, ಕುಟುಂಬಸ್ಥರು, ಆಡಳಿತ ಮೊಕ್ತೇಸರ ಡಾ| ಎಂ.ಪಿ. ರಾಘವೇಂದ್ರ ರಾವ್‌ ಉಪಸ್ಥಿತರಿದ್ದರು. ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು. ಸತತ ಅರ್ಚನೆ, ನಿರಂತರ ಸಂಕೀರ್ತನೆ, ಅನ್ನಸಂತರ್ಪಣೆ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next