Advertisement

ಅಪರೂಪದ ಯಕ್ಷ ಪ್ರಸಂಗಗಳು

08:31 PM Oct 19, 2019 | mahesh |

ಭಾರತೀಯ ನೆಲದ ದೊಡ್ಡ ಆಸ್ತಿಕ ಔನ್ನತ್ಯವನ್ನು ಕಾಪಿಡುವಲ್ಲಿ ತುಳಸಿಯ ಸ್ಥಾನ ಮಹತ್ತರವಾದದ್ದು. ಯಕ್ಷಗಾನವೂ ಪರಮಪೂಜ್ಯ ಭಾವದಿಂದ ತುಳಸಿಯ ಕಥೆಗೆ ಪದ್ಯ ಹೆಣೆದಿದೆ. ತುಳಸಿ ಜಲಂಧರ ಪ್ರಸಂಗದ ಓಘವೇ ಚೆಂದ. ಎಳವೆಯಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ “ತುಳಸಿ ಜಲಂಧರ’ ಪ್ರಸಂಗ ಕಂಡುಂಡ ಕರಾವಳಿ ಯಕ್ಷ ಪ್ರೇಕ್ಷಕರ ದಂಡೇ ಕಾಣಸಿಗಬಹುದು.

Advertisement

ಹಾಸ್ಯ ರಸದ ಅಭಿವ್ಯಕ್ತಿ, ಯಾವುದೇ ಕಲಾಪ್ರಕಾರ ದಲ್ಲೂ ಕಲಾವಿದನಿಗೆ ಒಂದು ಸವಾಲು. ಯಕ್ಷಗಾನ ದಲ್ಲಿ ಹಾಸ್ಯ ರಸವನ್ನೇ ಪ್ರಧಾನವಾಗಿಸಿ “ಕಾಶಿ ಮಾಶಿ’ ಪ್ರಸಂಗವನ್ನು ಕುಂದಗನ್ನಡದಲ್ಲಿ ನಡುವಿನಲ್ಲಿ ನಿಲ್ಲಿಸಲಾ ಗಿದೆ. ಪ್ರೇಕ್ಷಕರಿಗೆ ನವಿರು ಹಾಸ್ಯದ ಕಚಗುಳಿಯಿಡಲು ಪಾತ್ರೋಚಿತ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನದ ನವ- ಯುವ ಕಲಾವಿದರು ಬಯಸುವ ಪಾತ್ರ “ಅಭಿಮನ್ಯು
ಕಾಳಗ’ದ ಅಭಿಮನ್ಯು. ಅತ್ಯಂತ ಚುರುಕು ನಡೆಯ ಈ ಪ್ರಸಂಗ, ಅಭಿಮನ್ಯುವಿನ ಜೊತೆಗೆ ಪ್ರೇಕ್ಷಕನಲ್ಲೂ ರಣೋತ್ಸಾಹ ತುಂಬುತ್ತದೆ. “ಯುದ್ಧಕ್ಕೆ ಹೋಗಬೇಡ ಮಗನೆ’ ಎಂದರೆ, “ತಡೆವರೇನೆಲೆ ತಾಯೆ…?’ ಎನ್ನುವ ಮಗನನ್ನು ತಡೆಯಲಾರದೆ, “ಸುರಿವ ಕಂಬನಿಯನ್ನು…’ ಪದ್ಯಕ್ಕೆ ಸುಭದ್ರೆಯ ರಂಗ ನಿರ್ಗಮನ. ವೀರ ಮಗನ ತಾಯಿಯ
ಅಷ್ಟೂ ಸಂಕಟ, ಮಾತುಗಳಲ್ಲಿ ಹೇಳದೆಯೂ ಎದೆಯಾಳಕ್ಕೆ ಇಳಿಸುತ್ತದೆ. ಭಾನುವಾರದ ಈ ಆಟದಲ್ಲಿ ಸಂದರ್ಭಕ್ಕೆ ತಕ್ಕಂತೆ ಐದು ಅಭಿಮನ್ಯು!

ಯಕ್ಷಪ್ರಿಯ ದಿ. ಗಂಗಾಧರ ಆಚಾರ್ಯರ ನೆನಪಿನಲ್ಲಿ ನಡೆಯುತ್ತಿರುವ ಈ ಆಟಗಳ
ಸಂಘಟನೆ, ಶಶಿಧರ ಆಚಾರ್ಯ ಹಾಗೂ ಸಂಯೋಜನೆ, ರಾಘವೇಂದ್ರ ಚಾತ್ರಮಕ್ಕಿ
ಅವರದು.

ಕಲಾವಿದರು: ಹಳ್ಳಾಡಿ ಜಯರಾಮ, ಕೋಡಿ ವಿಶ್ವನಾಥ, ವಿದ್ಯಾಧರ ಜಲವಳ್ಳಿ,
ಶಶಿಕಾಂತ್‌ ಕಾರ್ಕಳ, ಮಾಧವ ನಾಗೂರು, ಹಕ್ಲಾಡಿ ರವಿ, ಉಳ್ಳೂರು ಶಂಕರ, ಕಿರಾಡಿ
ಪ್ರಕಾಶ್‌, ಕೆಕ್ಕಾರ್‌ ಆನಂದ್‌, ಉ. ನಾರಾಯಣ, ವಿಶ್ವನಾಥ ಹೆನ್ನಾಬೈಲ್‌, ಚಂದ್ರಹಾಸ ಗೌಡ ಹೊಸಪಟ್ಣ, ಪೇತ್ರಿ ರಾಘವೇಂದ್ರ, ಗಣೇಶ ಬಳೆಗಾರ್‌, ಪ್ರದೀಪ್‌ ನಾರ್ಕಳಿ ದ್ವಿತೇಶ್‌ ಕಾಮತ್‌, ಮಾ| ಹೃತ್ವಿಕ್‌ ಬಾಬು ಹಾಗೂ ಇತರರು.

ಸ್ಥಳ: ಉದಯಭಾನು ಕಲಾಸಂಘ, ಗವಿಪುರಂ.
ದಿನಾಂಕ: 20-10-2019ರ ಭಾನುವಾರ, ಮಧ್ಯಾಹ್ನ 2.30ರಿಂದ
ಸಂಪರ್ಕ: 9242326862, 9164156884 | ಪ್ರವೇಶ ದರ: 300ರಿಂದ ಆರಂಭ

Advertisement
Advertisement

Udayavani is now on Telegram. Click here to join our channel and stay updated with the latest news.

Next