ಮಂಗಳೂರು: ಸರೋಜ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದು ಅಪರೂಪದ ಚಿಕಿತ್ಸೆ ನಡೆದಿದೆ.ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾದ 7 ತಿಂಗಳ ಗರ್ಭಿಣಿ ಚಂಚಲಾಕ್ಷಿ ಅವರಿಗೆ ಗೆ„ನೆಕೋಲ ಜಿಸ್ಟ್ ಡಾ| ರಶ್ಮಿ ಪೊಳ್ನಾಯ ಹಾಗೂ ಶಿಶು ತಜ್ಞೆ ಡಾ| ಸ್ವಾತಿ ಎಸ್. ರಾವ್ ಮುಂದಾಳತ್ವದಲ್ಲಿ ಮಗುವನ್ನು ಸಿಸೇರಿಯನ್ ಮೂಲಕ ಹೊರ ತರಲಾಯಿತು. ಆದರೆ ಮಗುವಿಗೆ 9 ತಿಂಗಳು ಆಗದ ಹಿನ್ನೆಲೆಯಲ್ಲಿ ಮಗುವನ್ನು ಎನ್.ಐ.ಸಿ.ಯು.ಗೆ ಸ್ಥಳಾಂತರಿಸಲಾಯಿತು. ಇನ್ನು ಉಸಿರಾಟದ ಪ್ರಯತ್ನ ವಿಫಲಗೊಂಡಾಗ ಕೃತಕ ಉಸಿರಾಟದ ಯಂತ್ರ(ವೆಂಟಿಲೇಟರ್) ಮೂಲಕ ಉಸಿರಾಡಿಸಲಾಯಿತು. ಬಾಯಿಯಿಂದ ಚೀಪುವ ಶಕ್ತಿಯನ್ನು ಹೊಂದದ ಕಾರಣ ಮಗುವಿಗೆ ಹೊಕ್ಕುಳಿನಿಂದ ಟ್ಯೂಬನ್ನು ತೂರಿಸಿ ಪೋಷಣೆಯನ್ನು ಪೂರೈಸಲಾಯಿತು. ವೈದ್ಯರ ಕಠಿನ ಶ್ರಮದ ಫಲವಾಗಿ ಸುಮಾರು 15 ದಿನಗಳ ಬಳಿಕ ಮಗು ಸಹಜ ಸ್ಥಿತಿಯತ್ತ ಬಂತು.
ಮಗುವಿನ ತಂದೆ ಚಂದ್ರಶೇಖರ ಮತ್ತು ತಾಯಿ ಚಂಚಲಾಕ್ಷಿ ಅವರು ಡಾ| ಸ್ವಾತಿ ರಾವ್ ತಂಡದಲ್ಲಿದ್ದ ಶ್ವೇತಾ, ಸಂಗೀತಾ, ರಾಬರ್ಟ್ ಮೊದಲಾದ ಸಿಬಂದಿಗೆ ಅಭಿನಂದನೆಯಿತ್ತರು.
ಚಿಕಿತ್ಸೆಗೆ ತಗಲಿದ ವೆಚ್ಚ ಭರಿಸಿದ ಸರೋಜ್ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಗಜಾನನ ಪ್ರಭು ಎನ್. ಮಾತನಾಡಿ, ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಲೇವಲ್ ಐ ಐಸಿಯುನ ಪ್ರತಿ ಒಂದು ಬೆಡ್‌ಗೆ ಒಂದು ನರ್ಸಿಂಗ್ ಸಿಬಂದಿಯೊಂದಿಗೆ ವೆಂಟಿಲೇಟರ್ ಹಾಗೂ ಡಯಾಲಿಸಿಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಅಲ್ಲದೆ ಎನ್‌ಐ ಸಿಯು ಈಗಾಗಲೇ ಒಂದು ಬಂಗಾರದ ಗರಿಯನ್ನು ಮುಡಿಗೇರಿಸಿಕೊಂಡಿದೆ ಎಂದು ಅವರು ಹೇಳಿದರು.