ಮಂಗಳೂರು: ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಚಿವ ಬಿ. ರಮಾನಾಥ ರೈ ಅವರು ಇದೀಗ ಪೂಜಾರಿ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ ಹರಿಕೃಷ್ಣ ಬಂಟ್ವಾಳ ಪತ್ರಿಕಾಗೋಷ್ಠಿ ನಡೆಸದಂತೆ ಸೂಚಿಸಿ ಎಂದು ಪೂಜಾರಿಯವರಲ್ಲಿ ಹೇಳುತ್ತಿದ್ದಾರೆ. ಕ್ಷಮೆ ಕೇಳುವುದಾದರೆ ಬಹಿರಂಗವಾಗಿ ಕೇಳಲಿ ಎಂದು ಸಾಮಾಜಿಕ ಕಾರ್ಯಕರ್ತ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.
Advertisement
ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂಜಾರಿ ಅವರನ್ನು ಅವಾಚ್ಯ ಶಬ್ದ ಗಳಿಂದ ನಿಂದಿಸಿಲ್ಲ ಎಂದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ನಾನು ವಾರದ ಹಿಂದೆ ಸವಾಲು ಹಾಕಿದ್ದೆ. ಆದರೆ ಅವರು ಬಾರದೇ ಇರುವುದರಿಂದ ಪೂಜಾರಿ ಅವರನ್ನು ತೆಗಳಿರುವುದು ಸಾಬೀತಾಗಿದೆ. ರೈ ಅವರಿಗೆ ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತಿದ್ದರೆ ನನ್ನ ಸವಾಲನ್ನು ಸ್ವೀಕರಿಸಿ ಅವರು ಧರ್ಮಸ್ಥಳಕ್ಕೆ ಬರುತ್ತಿದ್ದರು ಎಂದರು.
ಲೋಕಸಭಾ ಚುನಾವಣೆಯ ಬಳಿಕ ಪೂಜಾರಿ ಅವರಿಗೆ ಕರೆ ಮಾಡದ ರಮಾನಾಥ ರೈ ಅವರು ಈಗ ಕರೆ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ನೈಜ ವಿಷಯವನ್ನು ಸಮಾಜಕ್ಕೆ ತಿಳಿಸಬೇಕೆಂಬ ಉದ್ದೇಶ ದಿಂದ ನಾನು ಮಾಧ್ಯಮಗಳ ಮುಂದೆ ಬಂದಿದ್ದೇನೆಯೇ ಹೊರತು, ನನ್ನನ್ನು ಪೂಜಾರಿ ಅವರು ಪತ್ರಿಕಾಗೋಷ್ಠಿ ನಡೆಸಲು ಕಳುಹಿಸಿದ್ದಲ್ಲ ಎಂದರು. ರಮಾನಾಥ ರೈ ಅವರಿಗೆ ಅಧಿಕಾರದ ಆಸೆ ಇರಬಹುದು. ಆದರೆ ತಾನು ಯಾವುದೇ ಅಧಿಕಾರ ಲಾಲಸೆ ಹೊಂದಿಲ್ಲ ಎಂದವರು ವಿವರಿಸಿದರು.
Related Articles
Advertisement