Advertisement

ಅತ್ಯಂತ ಅಪರೂಪದ ಗುಲಾಬಿ ಬಣ್ಣದ ವಜ್ರ ಪತ್ತೆ

10:58 AM Jul 28, 2022 | Team Udayavani |

ಅಂಗೋಲಾ: ಅತ್ಯಂತ ಅಪರೂಪದ ಗುಲಾಬಿ ಬಣ್ಣದ ವಜ್ರವು ಆಫ್ರಿಕಾದ ಅಂಗೋಲಾ ಪ್ರದೇಶದಲ್ಲಿ ಪತ್ತೆಯಾಗಿದೆ.

Advertisement

ಈ ವಜ್ರವು ಕಳೆದ 300 ವರ್ಷಗಳಲ್ಲಿ ಪತ್ತೆಯಾದಂತಹ ಅತ್ಯಂತ ದೊಡ್ಡ ಗುಲಾಬಿ ವಜ್ರ ಎಂದು ವಜ್ರವನ್ನು ಪತ್ತೆಹಚ್ಚಿರುವ ಲುಕಾಪ ವಜ್ರ ಕಂಪನಿ ತಿಳಿಸಿದೆ.

ಲುಲೊ ಎಂಬ ಸ್ಥಳದಲ್ಲಿ ವಜ್ರ ಪತ್ತೆಯಾಗಿರುವ ಹಿನ್ನೆಲೆ ಅದಕ್ಕೆ “ದಿ ಲುಲೋ ರೋಸ್‌’ ಎಂದು ಹೆಸರಿಡಲಾಗಿದೆ.

170 ಕ್ಯಾರೆಟ್‌ನಷ್ಟು ಶುದ್ಧತೆ ಇರುವ ಈ ವಜ್ರವನ್ನು ಶೀಘ್ರವೇ ಅಂಗೋಲನ್‌ ರಾಷ್ಟ್ರೀಯ ವಜ್ರ ಮಾರಾಟ ಕಂಪನಿಯು ಟೆಂಡರ್‌ ಕರೆದು ಮಾರಾಟ ಮಾಡಲಿದೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next